ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ತಾತ್ಕಾಲಿಕ ಮಾರುಕಟ್ಟೆ ಸಮಸ್ಯೆ- ಶಾಸಕ ಭರತ್ ಶೆಟ್ಟಿ ಅಧಿಕಾರಿಗಳ ಜೊತೆ ಸಭೆ

ಸುರತ್ಕಲ್: ನಗರದ ತಾತ್ಕಾಲಿಕ ಮಾರುಕಟ್ಟೆಯ ಸಮಸ್ಯೆಗಳ ಕುರಿತಂತೆ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಆಯುಕ್ತರು, ಅಧಿಕಾರಿಗಳು, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು ಸಭೆಯನ್ನು ನಡೆಸಿದರು.

ಕೊರೊನಾ ಹಾವಳಿಯ ಸಂದರ್ಭ ಲಾಕ್ಡೌನ್ ನಿಂದ ಬಹಳಷ್ಟು ವ್ಯಾಪಾರಕ್ಕೆ ತೊಂದರೆಯಾಗಿದ್ದು, ಮಹಾನಗರ ಪಾಲಿಕೆಗೆ ತೆರಿಗೆ ಕಟ್ಟಲು ಸಾಧ್ಯವಾಗಿಲ್ಲ. ತೆರಿಗೆ ಏರಿಕೆಯಾಗಿದ್ದು ನಮಗೆ ಹೊರೆಯಾಗಿದೆ. ಇದನ್ನು ಕಡಿಮೆ ಮಾಡಬೇಕು ಮನವಿ ಮಾಡಿದ್ದರು. ಹಳೆಯ ಬಾಕಿ ತೆರಿಗೆಯನ್ನು ಪಾವತಿಸಲು ಕಂತು ಮೂಲಕ ಪಾವತಿಸಲು ಅವಕಾಶ ಕಲ್ಪಿಸಬೇಕು. ಇದೀಗ ಭಾರಿ ಪ್ರಮಾಣದಲ್ಲಿ ತೆರಿಗೆಯನ್ನು ಪಾವತಿಸಲು ಸೂಚನೆ ಬಂದಿರುವುದರಿಂದ ನಮಗೆ ಕಷ್ಟವಾಗುತ್ತದೆ ಎಂದು ಶಾಸಕರು ಹಾಗೂ ಮಹಾನಗರಪಾಲಿಕೆಯ ಸದಸ್ಯರಲ್ಲಿ ಅಳಲು ತೋಡಿಕೊಂಡ ಮೇರೆಗೆ ಸ್ಪಂದಿಸಿದ ಶಾಸಕರು ಸಭೆಯನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ತಾತ್ಕಾಲಿಕ ಮಾರುಕಟ್ಟೆಯ ಹೊರಭಾಗದಲ್ಲಿರುವ ಶೌಚಾಲಯವನ್ನು ವ್ಯಾಪಾರಿಗಳಿಗೆ ಬಳಕೆ ಮಾಡಿಕೊಳ್ಳಲು ನೀಡುವ ಬಗ್ಗೆ ಚರ್ಚಿಸಲಾಯಿತು. ಸುರತ್ಕಲ್ ರುದ್ರಭೂಮಿಯ ಮುಂಭಾಗದಲ್ಲಿರುವ ಶೌಚಾಲಯವನ್ನು ಸಾರ್ವಜನಿಕ ಉಪಯೋಗಕ್ಕೆ ಒದಗಿಸಲು ಶಾಸಕರು ಸಲಹೆ ನೀಡಿದರು.ಮೇಯರ್ ಪ್ರೇಮಾನಂದ ಶೆಟ್ಟಿ, ಆಯುಕ್ತ ಅಕ್ಷಯ್ ಶ್ರೀಧರ್, ಮನಪಾ ಸದಸ್ಯ ವರುಣ್ ಚೌಟ, ಜಯಾನಂದ ಅಂಚನ್, ಕಿರಣ್ ಕೋಡಿಕಲ್, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/04/2022 05:56 pm

Cinque Terre

2.87 K

Cinque Terre

0