ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ವಾರಾಹಿ ಉಪಕಾಲುವೆ ಸ್ಫೋಟವಾಗಿ 4 ವರ್ಷ ಕಳೆದರೂ ಸಿಕ್ಕಿಲ್ಲ ಪರಿಹಾರ!

ಕುಂದಾಪುರ: ಇಲ್ಲಿನ ಯಾಡಾಡಿ ಮತ್ಯಾಡಿಯಲ್ಲಿ 2017 ರ ಸುಮಾರಿಗೆ ವಾರಾಹಿ ನೀರು ಹರಿಸುವ ಉದ್ದೇಶದಿಂದ ಕಾಲುವೆ ಕಾಮಗಾರಿ ಪ್ರಾರಂಭಗೊಂಡಿತ್ತು.

ಆದರೆ, ಕಾಲುವೆ ನಿರ್ಮಾಣದ ಸಮಯ ಬಂಡೆಕಲ್ಲು ಸಿಕ್ಕ ಕಾರಣ ಆ ಬಂಡೆಕಲ್ಲನ್ನು ನಿರಂತರ ಸ್ಫೋಟಗೊಳಿಸಿ ಕಾಮಗಾರಿ ಮುಂದುವರೆಸಿದ್ದರು. ಬಂಡೆ ಕಲ್ಲು ಸ್ಫೋಟಗೊಳಿಸಿದ್ದರಿಂದ ಹತ್ತಿರದ ಮನೆಗಳು ಸ್ಫೋಟದ ಪರಿಣಾಮ ಬಿರುಕುಬಿಟ್ಟಿದೆ.

ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದರಿಂದ ಬಿರುಕು ಬಿಟ್ಟ ಮನೆಗಳಿಗೂ ಪರಿಹಾರವಿಲ್ಲ. ಹಾಗೇ ವಾರಾಹಿ ಕಾಲುವೆ ಕಾಮಗಾರಿಯೂ ಪೂರ್ಣವಾಗಿಲ್ಲ. ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

14/04/2022 09:07 pm

Cinque Terre

14.24 K

Cinque Terre

0

ಸಂಬಂಧಿತ ಸುದ್ದಿ