ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಪಾಯವನ್ನು ಆಹ್ವಾನಿಸುತ್ತಿದೆ ಕೃಷ್ಣ ಮಠಕ್ಕೆ ಹೋಗುವ ರಸ್ತೆ

ಉಡುಪಿ; ಕಲ್ಸಂಕದ ರಾಷ್ಟ್ರೀಯ ಹೆದ್ದಾರಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣಕ್ಕೆ ಸಂಪರ್ಕಿಸುವ ರಸ್ತೆ ಮೂಲಕ ಇಂದ್ರಾಣಿ ನದಿ ಹಾದು ಹೋಗುತ್ತದೆ. ಆದರೆ ರಸ್ತೆ ಅಂಚಿನಲ್ಲಿ ತಡೆ ಗೋಡೆ ಇಲ್ಲದೆ ಇರುವುದರಿಂದ ಅಪಾಯ ಆಹ್ವಾನಿಸುವ ಸ್ಥಳವಾಗಿ ಮಾರ್ಪಟ್ಟಿದೆ.

ಈ ಹಿಂದೆ ಇಲ್ಲಿ ವಾಹನಗಳು, ಪಾದಚಾರಿಗಳು ನದಿಗೆ ಉರುಳಿ ಬಿದ್ದಿರುವ ಘಟನೆಗಳು ನಡೆದಿವೆ. ಈ ರಸ್ತೆಯಲ್ಲಿ ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಿಕರ ವಾಹನಗಳ ದಟ್ಟಣೆ ಇರುತ್ತದೆ. ವಾಹನಗಳು, ಪಾದಚಾರಿಗಳು ಆಯತಪ್ಪಿ ಎಡವಿ ನದಿಗೆ ಬೀಳುವ ಸಾಧ್ಯತೆಗಳು ಇಲ್ಲಿವೆ. ಇದಲ್ಲದೆ ,ನದಿಯ ನೀರು ಕಲುಷಿತಗೊಂಡಿದ್ದು ಗಬ್ಬು ವಾಸನೆಯಿಂದ ಕೂಡಿದೆ.ಒಂದು ವೇಳೆ ಇಲ್ಲಿ ಆಯ ತಪ್ಪಿ ಬಿದ್ದರೆ ಮೇಲೆ ಬರುವುದು ಸಂಶಯ. ನಗರಸಭೆ ತಕ್ಷಣ ಇಂದ್ರಾಣಿ ನದಿ ಪಕ್ಕದ ರಸ್ತೆಯ ಅಂಚಿನಲ್ಲಿ ತಡೆಗೋಡೆ ನಿರ್ಮಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಡೆಯಬೇಕು ಎಂದು ಸಮಾಜ ಸೇವಕ ನಿತ್ಯಾನಂದ ಆಗ್ರಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

07/04/2022 02:21 pm

Cinque Terre

8.91 K

Cinque Terre

0

ಸಂಬಂಧಿತ ಸುದ್ದಿ