ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇಂಧನ ಬೆಲೆ ಏರಿಕೆ ಎಫೆಕ್ಟ್; ಹಲವು ಪೆಟ್ರೋಲ್ ಬಂಕ್ ಗಳು ಬಂದ್ !

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ: ಪೆಟ್ರೋಲ್, ಡೀಸೆಲ್ ದರ ಏರಿಕೆ ಗಂಭೀರ ಪರಿಣಾಮಗಳನ್ನೇ ತಂದೊಡ್ಡುತ್ತಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಸ್ಆರ್ ಹಾಗೂ ನಯರ ಪೆಟ್ರೋಲ್ ಬಂಕುಗಳು ಒಂದರ ಹಿಂದೆ ಒಂದರಂತೆ ಮುಚ್ಚುತ್ತಿವೆ. ಮೊದಲೇ ದರ ಏರಿಕೆಯಿಂದ ನಲುಗಿರುವ ಗ್ರಾಹಕರು, ಇದೀಗ ಪೆಟ್ರೋಲ್ ಬಂಕ್ ಗಳಿಗೆ ಪ್ರದಕ್ಷಿಣೆ ಹಾಕಲಾರಂಭಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಸ್ ಆರ್ ಹಾಗೂ ನಯರಾ ಪೆಟ್ರೋಲ್ ಬಂಕುಗಳು ಮುಚ್ಚಿವೆ. ಸುಮಾರು 15 ದಿನಗಳಿಂದೀಚೆಗೆ ಹಂತಹಂತವಾಗಿ ಒಂದೊಂದೇ ಪೆಟ್ರೋಲ್ ಬಂಕ್ ಗಳು ಮುಚ್ಚಲಾರಂಭಿಸಿವೆ. ಇಷ್ಟಕ್ಕೂ, ಈ ಅನಿರೀಕ್ಷಿತ ಮುಚ್ಚುಗಡೆಗೆ ಕಾರಣವೇನು ಗೊತ್ತಾ? ಪೂರೈಕೆದಾರರು ಮತ್ತು ಡೀಲರ್ ಗಳ ನಡುವಿನ ತಿಕ್ಕಾಟ! ಹೌದು, ಕಳೆದ ಕೆಲದಿನಗಳಿಂದ ಈ ತಿಕ್ಕಾಟ ಜೋರಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗುವುದರ ಮುನ್ಸೂಚನೆ ಅರಿತ, ಪೂರೈಕೆದಾರರು ಮೊದಲೇ ಸ್ಟಾಕ್ ಮಾಡಿರಿಸಿದ್ದರು. ಡೀಲರ್ ಗಳಿಗೆ ಸರಬರಾಜು ನಿಲ್ಲಿಸಿದ್ದರು. ಇದರಿಂದ ತೀವ್ರ ಸಂಕಷ್ಟ ಅನುಭವಿಸಿದ ಪೆಟ್ರೋಲ್ ಬಂಕ್ ಡೀಲರ್ ಗಳು ಕಂಗಾಲಾದರು. ಈಗ ಪೆಟ್ರೋಲ್- ಡೀಸೆಲ್ ಸರಬರಾಜು ಆಗುತ್ತಿದೆ. ಆದರೆ. ಉಳಿದ ಬಂಕುಗಳ ದರಕ್ಕಿಂತ 2 ರೂ. ಹೆಚ್ಚಿನ ದರ ನಿಗದಿಯಾಗಿದೆ. ಇದೇ ಕಾರಣಕ್ಕೆ ಉಡುಪಿ ಜಿಲ್ಲೆಯ ಡೀಲರ್ ಗಳು ಪೆಟ್ರೋಲ್ ಪಂಪ್ ಗಳನ್ನು ಬಂದ್ ಮಾಡಿದ್ದಾರೆ.

ಪೆಟ್ರೋಲ್ ದರ ಏರಿಕೆಯ ಬೇರೆಬೇರೆ ಪರಿಣಾಮಗಳನ್ನು ಕಂಡಿದ್ದೇವೆ. ದಿನಬಳಕೆ ವಸ್ತುಗಳ ದರ ಏರಿಕೆ, ಹೋಟೆಲ್ ನಲ್ಲಿ ತಿಂಡಿ-ತಿನಿಸು ದರ ಏರಿಕೆ ಆಗಿರುವುದನ್ನು ಪ್ರತಿದಿನ ಕಾಣುತ್ತಿದ್ದೇವೆ. ಇದೀಗ ಪೆಟ್ರೋಲ್ ಬಂಕ್ ಗಳು ಬಂದ್ ಆಗುವ ಹಂತಕ್ಕೆ ಹೋಗಿರುವುದು ಆಶ್ಚರ್ಯವೇ ಸರಿ! ನಿಗದಿತ ದರ ಹೆಚ್ಚಳ ಮಾಡಿ ಪೆಟ್ರೋಲ್ ಮಾರಲು ಸಾಧ್ಯವಿಲ್ಲ. ಯಾಕೆಂದರೆ ಹೀಗೆ ಮಾಡಿದರೆ ಬಂಕ್ ಗಳ ವಿಶ್ವಾಸಾರ್ಹತೆ ಹಾಳಾಗುತ್ತದೆ. ಸದ್ಯ ಇಲ್ಲಿ ಪೆಟ್ರೋಲ್ ಹಾಕುತ್ತಿದ್ದ ವಾಹನ ಸವಾರರು ಬಂಕ್ ಗೆ ಬಂದು ವಾಪಸ್ ಹೋಗುತ್ತಿದ್ದಾರೆ.

ಒಟ್ಟಾರೆ ದರ ಏರಿಕೆಯ ಬಿಸಿ ಎಲ್ಲ ವರ್ಗಕ್ಕೂ ತಟ್ಟುತ್ತಿದೆ. ಸ್ವತಃ ಪೆಟ್ರೋಲ್ ಬಂಕ್ ಮಾಲೀಕರೇ ಏರಿಕೆ ಬಿಸಿಗೆ ಬಂದ್ ಮಾಡುವ ನಿರ್ಧಾರ ಕೈಗೊಂಡಿರುವುದು ಅಚ್ಚರಿಯ ಬೆಳವಣಿಗೆ.

Edited By : Nagesh Gaonkar
Kshetra Samachara

Kshetra Samachara

04/04/2022 08:12 pm

Cinque Terre

15.02 K

Cinque Terre

3

ಸಂಬಂಧಿತ ಸುದ್ದಿ