ಬಜಪೆ : ಕೈಕಂಬದಿಂದ ಮಠದಗುಡ್ಡೆ ಮೂಲಕ ಗುರುಪುರಕ್ಕೆ ಸಂಪರ್ಕಿಸುವ ರಸ್ತೆಯ ಅಂಚಿನಲ್ಲಿ ಕಸದ ರಾಶಿ ರಾಶಿ ಸಂಗ್ರಹವಾಗಿ ಕೊಳೆತು ನಾರುತ್ತಿದ್ದು,ಗಬ್ಬುನಾಥ ಬೀರುತ್ತಿದೆ.
ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ದಿನದಿಂದ ದಿನಕ್ಕೆ ರಸ್ತೆಯಂಚಿನಲ್ಲಿ ಕಸದ ರಾಶಿ ಹೆಚ್ಚಾಗುತ್ತಲೇ ಇದೆ.
ಈ ಸಂಬಂಧ ಗ್ರಾಮ ಪಂಚಾಯತ್ ಕೂಡ ಇತ್ತ ಕಡೆ ಗಮನ ಹರಿಸದೆ ಮೌನವಾಗಿದೆ. ಕಸದ ರಾಶಿ ಇರುವ ಬಗ್ಗೆ ಪಂಚಾಯತ್ ಗೆ ಕೂಡ ತಿಳಿಸಲಾಗಿದ್ದು,ಯಾವುದೇ ಸ್ಪಂದನೆ ಇಲ್ಲದಂತಾಗಿದೆ.
ಈಗಾಗಲೇ ಕಸವು ಕೊಳೆತು ನಾರುತ್ತಿದ್ದು,ಬೇರೆ ಬೇರೆ ರೋಗ ಗಳಿಗೂ ಆಹ್ವಾನ ನೀಡುವಂತಿದೆ.ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಎಚ್ಚೆತ್ತುಕೊಂಡು ರಸ್ತೆಯಂಚಿನಲ್ಲಿ ಕಸ ಎಸೆಯುವವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
30/03/2022 07:41 pm