ಉಡುಪಿ : ಉಡುಪಿ ನಗರದ ಪೂರ್ಣ ಪ್ರಜ್ಞ ಕಾಲೇಜಿಗೆ ಹೋಗುವ ರಸ್ತೆ ಮದ್ಯೆ ಕಾಂಕ್ರೀಟ್ ಸ್ಲ್ಯಾಬ್ ಗಳು ಎದ್ದು ವಾಹನ ಸವಾರರಿಗೆ ಭಾರೀ ಸಮಸ್ಯೆ ಉಂಟಾಗಿತ್ತು.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿ ನಗರಸಭೆಯ ಗಮನ ಸೆಳಯುವ ಕೆಲಸ ಮಾಡಿತ್ತು. ಇದೀಗ ಹೊಸ ಸ್ಲ್ಯಾಬ್ ಅಳವಡಿಸುವ ಕಾರ್ಯ ನಡೆದಿದೆ.
ಈ ರಸ್ತೆ ಮೂಲಕ ಸಾಗಲು ರಾತ್ರಿ ಹೊತ್ತು ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿತ್ತು. ಮಾತ್ರವಲ್ಲದೆ ಈ ರಸ್ತೆ ಗುಂಡಿಗಳಿಂದ ತುಂಬಿದ್ದರಿಂದ ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿದ್ದವು.
ಸಾವಿರಾರು ವಿದ್ಯಾರ್ಥಿಗಳು ಹಾಗೂ ಉಡುಪಿಯ ಕೃಷ್ಣಮಠಕ್ಕೆ ಸಾಗುವ ಪ್ರಮುಖ ರಸ್ತೆ ಇದಾಗಿದ್ದರಿಂದ ಘನ ವಾಹನಗಳ ಸಂಚಾರದಿಂದಾಗಿ ಕಾಂಕ್ರೀಟ್ ಸ್ಲ್ಯಾಬ್ ಒಡೆದು ಹೋಗಿತ್ತು.
ಇದೀಗ ನಗರಸಭೆ ಹಳೆಯ ಕಾಂಕ್ರಿಟ್ ಸ್ಲ್ಯಾಬ್ ತೆಗೆದು ಹೊಸ ಸ್ಲ್ಯಾಬ್ ಅಳವಡಿಸುವ ಕಾರ್ಯ ನಡೆಸಿದೆ.
PublicNext
23/03/2022 10:36 pm