ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಹದಗೆಟ್ಟ ಎರ್ಮಾಳು ಬೀಚ್ ರಸ್ತೆ;ಟಿಪ್ಪರ್ ತಡೆದು ವಾಪಾಸು ಕಳುಹಿಸಿದ ಜನ

ಕಾಪು : ನಿರಂತರವಾಗಿ ಮಣ್ಣು ಸಾಗಾಟ ನಡೆಸಿ ಎರ್ಮಾಳು ಬೀಚ್ ಬಲ ಬದಿಯ ರಸ್ತೆಯ ಹಾಳಾಗಿದೆ.

ಇದೀಗ ಎಡ ಬದಿಯ ರಸ್ತೆಗೂ ಲಗ್ಗೆ ಇಟ್ಟ ಟಿಪ್ಪರ್ ಗಳನ್ನು ತಡೆದ ಸಾರ್ವಜನಿಕರು ಗ್ರಾ.ಪಂ. ಪ್ರತಿನಿಧಿಗಳ ಸಹಕಾರದೊಂದಿಗೆ ಟಿಪ್ಪರ್ ಗಳನ್ನು ಮರಳಿ ಕಳುಹಿಸಿದ ಘಟನೆ ತೆಂಕ ಎರ್ಮಾಳು ಬೀಚ್ ರಸ್ತೆಯಲ್ಲಿ ನಡೆದಿದೆ.

ಕೆಲವು ಸ್ಥಳೀಯ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಂಡ ವ್ಯಕ್ತಿಯೋರ್ವರು ತನ್ನ ರೆಸಾರ್ಟ್ ನಿರ್ಮಾಣಕ್ಕಾಗಿ ಜಾಗವನ್ನು ಎತ್ತರಗೊಳಿಸಲು ಸಾವಿರಾರು ಲೋಡ್ ಮಣ್ಣು ಸಾಗಿಸಲು ಮೀನುಗಾರಿಕಾ ರಸ್ತೆ ಉಪಯೋಗಿಸಿದ್ದರ ಪರಿಣಾಮ, ರಸ್ತೆ ಜನರಿಗೆ ಉಪಯೋಗಿಸಲು ಅಸಾಧ್ಯವಾದಷ್ಟು ಕೆಟ್ಟು ಹೋಗಿತ್ತು.

ಇದೀಗ ಮತ್ತೊಂದು ಪಾಶ್ವದ ರಸ್ತೆಯಲ್ಲಿ ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯ ರೆಸಾರ್ಟ್ ವೊಂದಕ್ಕೆ ಮಣ್ಣು ಸಾಗಿಸಲು ಸಾಲುಗಟ್ಟಿ ಟಿಪ್ಪರ್ ಗಳು ಬರುತ್ತಿರುವಂತೆ ಎಚ್ಚರಗೊಂಡ ಸ್ಥಳೀಯರು ಟಿಪ್ಪರ್ ಗಳನ್ನು ತಡೆದು ಗ್ರಾ.ಪಂ.ಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಮಾತುಕತೆ ನಡೆಸಿ, ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯ ರೆಸಾರ್ಟ್ ಗೆ ಅದಮಾರಿನಿಂದ ಮಣ್ಣು ಸಾಗಿಸಲು ಆ ಗ್ರಾಮದಲ್ಲಿ ಬೇಕಾದಷ್ಟು ರಸ್ತೆಗಳಿವೆ ಅದನ್ನು ಬಳಸಿಕೊಳ್ಳಿ ಎಂಬುದಾಗಿ ಮತ್ತೆ ಈ ರಸ್ತೆ ಉಪಯೋಗ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿ ಮರಳಿ ಕಳುಹಿಸಿದ್ದಾರೆ.

Edited By : Shivu K
Kshetra Samachara

Kshetra Samachara

11/03/2022 01:23 pm

Cinque Terre

10.86 K

Cinque Terre

0

ಸಂಬಂಧಿತ ಸುದ್ದಿ