ಮುಲ್ಕಿ: ಹಳೆಯಂಗಡಿ ಗ್ರಾ.ಪಂ ವ್ಯಾಪ್ತಿಯ ಅಂತರರಾಷ್ಟ್ರೀಯ ಸಸಿಹಿತ್ಲು ಮುಂಡಾ ಬೀಚ್ ಹಾಗೂ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಸಂಪರ್ಕರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು, ಸಂಚಾರ ತ್ರಾಸದಾಯಕವಾಗಿ ಪರಿಣಮಿಸಿದೆ.
ಹಳೆಯಂಗಡಿಯಿಂದ ಸದಾ ವಾಹನ ಸಂಚಾರ ಬ್ಯೂಸಿ ಯಾಗಿರುವ ಈ ರಸ್ತೆ ಕದಿಕೆ ಸೇತುವೆ ಬಳಿ ತೀರಾ ಹದಗೆಟ್ಟಿದ್ದು ಮಾರಣಾಂತಿಕ ಹೊಂಡಗಳಿಂದ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದೆ. ಮುಂದಿನ ಕೆಲವೇ ದಿನಗಳಲ್ಲಿ ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀಭಗವತಿ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯಲಿದ್ದು ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸುವ ಮೊದಲು ರಸ್ತೆ ದುರಸ್ತಿ ಪಡಿಸಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾದ ಶಾಸಕ ಉಮಾನಾಥ ಕೋಟ್ಯಾನ್ ಸೂಚನೆ ಮೇರೆಗೆ ರಸ್ತೆಯ ಹೊಂಡ ಮುಚ್ಚುವ ಕಾರ್ಯ ಆರಂಭಗೊಂಡಿದ್ದು ತಾತ್ಕಾಲಿಕ ಡಾಮರೀಕರಣ ನಡೆಯಲಿದೆ ಎಂದು ಹಳೆಯಂಗಡಿ ಗ್ರಾಪಂ ಉಪಾಧ್ಯಕ್ಷ ಅಶೋಕ್ ಬಂಗೇರ ತಿಳಿಸಿದ್ದಾರೆ.
ರಸ್ತೆ ಅವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಿದ ಪಬ್ಲಿಕ್ ನೆಕ್ಸ್ಟ್ ವರದಿಗೆ ಸ್ಥಳೀಯರು ಧನ್ಯವಾದ ಸಲ್ಲಿಸಿದ್ದಾರೆ. ಅದೇ ರೀತಿ ಸಸಿಹಿತ್ಲು ಸಂಪರ್ಕ ಕಲ್ಪಿಸುವ ಹೊಂಡ ಮಾಯವಾದ ಚಿತ್ರಾಪು ಮೀನುಗಾರಿಕಾ ರಸ್ತೆ ದುರಸ್ತಿ ಪಡಿಸಬೇಕು ಹಾಗೂ ಕದಿಕೆ ಸೇತುವೆ ಬಳಿ ದುಷ್ಕರ್ಮಿಗಳು ಬಿಸಾಡಿರುವ ತ್ಯಾಜ್ಯದ ರಾಶಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
08/03/2022 07:43 am