ಬಜಪೆ : ಗುರುಪುರ ಬಂಟರ ಮಾತೃ ಸಂಘ ಮಾಸಿಕ ಸಭೆಯು ಗುರುಪುರ ಕುಕ್ಕುದಕಟ್ಟೆಯಲ್ಲಿರುವ ಕಚೇರಿಯಲ್ಲಿಇಂದು ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಹೊಸಲಕ್ಕೆ ಮೂಡುಶೆಡ್ಡೆಅವರ ಅಧ್ಯಕ್ಷತೆಯಲ್ಲಿನಡೆಯಿತು.ಸಭೆಯಲ್ಲಿ ಸಮಾಜದ ಅಶಕ್ತ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ತೆಂಕುಳಿಪಾಡಿ ಗ್ರಾಮದ ಜಗದೀಶ್ ರೈ ಹಾಗೂ ಮೂಡುಶೆಡ್ಡೆಯ ಸುನೀತಾ ಶೆಟ್ಟಿ ಅವರ ಮನೆ ನಿರ್ಮಾಣಕ್ಕೆ ಪ್ರಥಮ ಹಂತದ ತಲಾ 50,000 ರೂ ಆರ್ಥಿಕ ನೆರವು ವಿತರಿಸಲಾಯಿತು.
ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಉಪಾಧ್ಯಕ್ಷ ಪ್ರವೀಣ್ ಆಳ್ವ ಕಡೆಗುಂಡ್ಯ, ಖಜಾಂಚಿ ಜಯರಾಮ ಶೆಟ್ಟಿ ವಿಜೇತ, ನಾಗರಾಜ ರೈ ತಿಮಿರಿಗುತ್ತು, ಯುವ ವಿಭಾಗದ ದೀಪಕ್ ಶೆಟ್ಟಿ ಲಿಂಗಮಾರುಗುತ್ತು ಸೇರಿದಂತೆ ಇತರರು ಉಪಸ್ಥಿತರಿದ್ದರು.
Kshetra Samachara
30/01/2022 10:01 pm