ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ರೈಲ್ವೇ ಕ್ರಾಸಿಂಗ್ ವಾಹನ ಸಂಚಾರ ಮುಕ್ತ

ಮುಲ್ಕಿ:ಹಳೆಯಂಗಡಿ ಹಾಗೂ ಪಕ್ಷಿಕೆರೆ ಕಿನ್ನಿಗೋಳಿ ಕಟೀಲು ನಡುವಿನ ಪ್ರಧಾನ ಸಂಪರ್ಕ ರಸ್ತೆಯ ಇಂದಿರಾನಗರದ ರೈಲ್ವೇ ಕ್ರಾಸಿಂಗನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಅಮಿಟೆಡ್ ಸಂಸ್ಥೆಯು ರೈಲ್ವೇ ಹಳಿ ಹಾಗೂ ಹಳಿಯ ಕೆಳಗೆ ಅಳವಡಿಸುವ ಸಿಮೆಂಟ್‌ನ ಪಟ್ಟಿಯನ್ನು ಹೊಸದಾಗಿ ಅಳವಡಿಸುವ ಕಾಮಗಾರಿಯು ನಡೆಯಲಿರುವುದರಿಂದ ಜ. 21 ಹಾಗೂ 22 ರಂದು ಎರಡು ದಿನ ಬಂದ್ ಮಾಡಿದ್ದು ಜ.22 ಶನಿವಾರ ರಾತ್ರಿ 10 ಗಂಟೆಗೆ ವಾಹನ ಸಂಚಾರ ಮುಕ್ತಗೊಳಿಸಲಾಗಿದೆ

.ಕೊಂಕಣ ರೈಲ್ವೆ ರೈಲ್ವೆ ಅಧಿಕಾರಿಗಳ ಮೂಲಗಳ ಪ್ರಕಾರ ರಸ್ತೆಯನ್ನು ಬಂದ್ ಮಾಡಿ ಕಾಮಗಾರಿ ವೇಗದಿಂದ ನಡೆಯುತ್ತಿದ್ದರೂ ಆಗಾಗ್ಗೆ ಬರುತ್ತಿರುವ ರೈಲು ಸಂಚಾರದಿಂದ ಕಾಮಗಾರಿ ನಿಧಾನವಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ಎರಡು ದಿನ ರೈಲ್ವೆ ಕ್ರಾಸಿಂಗ್ ಮುಚ್ಚಿದ್ದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದ್ದು ಈಗಿನ ಬೆಲೆ ಏರಿಕೆ ನಡುವೆ ಸುತ್ತುಬಳಸಿ ಪ್ರಯಾಣ ಬಗ್ಗೆ ವಾಹನ ಸವಾರರು ರೈಲ್ವೆ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು

ಸದಾ ಜನನಿಬಿಡತೆಯ ವಾಹನ ಸಂಚಾರ ಕೂಡಿರುವ ಹಳೆಯಂಗಡಿ ಇಂದ್ರನಗರ ರೈಲ್ವೇ ಕ್ರಾಸಿಂಗ್ ಬಳಿ ಫ್ಲೈ ಓವರ್ ಅವಶ್ಯಕತೆ ಇದ್ದು ಕೂಡಲೇ ಸಂಸದರು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

23/01/2022 07:10 pm

Cinque Terre

8.99 K

Cinque Terre

0

ಸಂಬಂಧಿತ ಸುದ್ದಿ