ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು: ಅಪಾಯದಲ್ಲಿ ಕಿರುಸೇತುವೆ

ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಪಣಂಬೂರು ಕಿನ್ನಿಗೋಳಿ-ಕಟೀಲು ಸಂಪರ್ಕ ರಸ್ತೆಯ ಬ್ರಿಟಿಷರ ಕಾಲದ ತೋಕೂರು ಕಿರುಸೇತುವೆ ಅಪಾಯವನ್ನು ಆಹ್ವಾನಿಸುತ್ತಿದೆ.

ಬ್ರಿಟಿಷರ ಕಾಲದ ಕಿರುಸೇತುವೆ ಕೆಳಗಡೆ ಬಿರುಕುಗಳು ಉಂಟಾಗಿದ್ದು ಹಳೆಯ ಕಾಲದ ಕಾಂಕ್ರೀಟ್ ಆಧಾರ ಸ್ತಂಭಗಳು ಕುಸಿಯುವ ಹಂತದಲ್ಲಿದೆ.

ಸೇತುವೆ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕುಸಿದಿದ್ದು ಭಾರವಾದ ವಾಹನಗಳು ಮತ್ತೆ ಸಂಚರಿಸುತ್ತಿರುವುದರಿಂದ ಕುಸಿತದ ಭೀತಿ ಎದುರಾಗಿದೆ.

ಸೇತುವೆ ಕುಸಿದರೆ ಪಡುಪಣಂಬೂರು ಕಿನ್ನಿಗೋಳಿ ಕಟೀಲು ಮೂಡಬಿದ್ರೆ ಸಂಪರ್ಕ ಕಡಿದುಹೋಗಿ ಸುತ್ತು ಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುವ ಕಿರು ಸೇತುವೆಯಲ್ಲಿ ಅಪಾಯ ಸಂಭವಿಸುವ ಮೊದಲೇ ಸಂಬಂಧಪಟ್ಟ ಆಡಳಿತ ಎಚ್ಚೆತ್ತು ಹಳೆ ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಿಸಲು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ಶೆಟ್ಟಿಗಾರ್ ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

22/01/2022 03:33 pm

Cinque Terre

6.09 K

Cinque Terre

0

ಸಂಬಂಧಿತ ಸುದ್ದಿ