ವರದಿ: ರಹೀಂ ಉಜಿರೆ
ಕೋಟೇಶ್ವರ: ಕೋಟೇಶ್ವರ ಗ್ರಾಪಂ ವ್ಯಾಪ್ತಿಯ ಶಾಲೆ ಕಟ್ಟಡ ಬಹುತೇಕ ಶಿಥಿಲಾವಸ್ಥೆಯಲ್ಲಿದ್ದು ಮಕ್ಕಳ ಜೀವವೇ ಅಪಾಯದಲ್ಲಿದೆ. ಇಲ್ಲಿನ ಪಬ್ಲಿಕ್ ಸ್ಕೂಲ್‌ನ ಗೋಡೆ ಬಹುತೇಕ ಬಿರುಕು ಬಿಟ್ಟಿದೆ.ಶತಮಾನ ದಾಟಿದ ಶಾಲಾ ಕೊಠಡಿಯ ಮೇಲ್ದಾವಣಿಯ ಪಕ್ಕಾಸು, ರೀಪು ಹಾಗೂ ಹೆಂಚುಗಳು ಕಿತ್ತು ಹೋಗಿವೆ. ವಿದ್ಯಾರ್ಥಿಗಳು ಪಕ್ಕದ ಕೊಠಡಿಯಲ್ಲಿ ಆತಂಕದಲ್ಲೇ ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.
ಹಿಂದೆ ನಿರ್ಮಾಣವಾದ ಶಾಲೆಯ 6 ಕೊಠಡಿಗಳು ಬಾಯ್ದೆರೆದು ನಿಂತಿವೆ. 3 ವರ್ಷ ಹಿಂದೆ ಸ್ವಲ್ಪ ಸ್ವಲ್ಪವೇ ಕುಸಿದು ಬಿದ್ದ ಪರಿಣಾಮ ಈ ಕೊಠಡಿ ಯಲ್ಲಿದ್ದ ತರಗತಿಯನ್ನು ಉಳಿದ ಕೋಣೆಗಳಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆದರೆ ಬೀಳುತ್ತಿರುವ ಕಟ್ಟಡಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಮನಸು ಮಾಡುತ್ತಿಲ್ಲ.
ಈ ಶಾಲೆಯಲ್ಲಿ ಒಟ್ಟು 17 ಕೊಠಡಿಗ ಳಿವೆ. 6 ಕೊಠಡಿಗಳು ಬಹುತೇಕ ಶಿಥಿಲಾವಸ್ಥೆ ತಲುಪಿದ್ದು 2 ಕೊಠಡಿಗಳು ನೆಲಕ್ಕುರುಳಿವೆ. ಉಳಿದ 4 ಕೊಠಡಿಗಳು ದುರವಸ್ಥೆಗೆ ತಲುಪಿ ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟವಾಡುತ್ತಿವೆ.
ಇನ್ನು ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಮತ್ತಿತರ ಸಮಸ್ಯೆಗಳಿದ್ದು ,ಮೊದಲು ಶಿಥಿಲಾವಸ್ಥೆ ತಲುಪಿದ ಕಟ್ಟಡವನ್ನು ಸೂಕ್ತ ರೀತಿಯಲ್ಲಿ ದುರಸ್ತಿ ,ಅಥವಾ ಹೊಸ ಕಟ್ಟಡ ನಿರ್ಮಿಸಿ ಕೊಡಬೇಕಿದೆ.ಸಂಬಂಧಪಟ್ಟ ಇಲಾಖೆ ತಕ್ಷಣ ಎಚ್ಚೆತ್ತುಕೊಳ್ಳಲಿ ಎಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿ.
Kshetra Samachara
22/01/2022 09:21 am