ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಗ್ರಾಮಸ್ಥರ ಬಹುಕಾಲದ ಕನಸು ನನಸು

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಬ್ಬಿನಾಲೆ- ಕಟ್ಟಿನಾಡು ಗ್ರಾಮಸ್ಥರ ಬಹುಕಾಲದ ಕನಸು ನನಸಾಗಲಿದೆ. ಗ್ರಾಮದಲ್ಲಿ ಸಂಪರ್ಕ ಸೇತುವೆ ಇಲ್ಲದೆ ಜನ ಸುತ್ತು ಬಳಸಿ ಬೈಂದೂರಿಗೆ ಬರಬೇಕಿತ್ತು.ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಲವಾರು ವರ್ಷದಿಂದ ಇತ್ತು. ಪ್ರತಿನಿತ್ಯ ನೂರಾರು ಜನ ಓಡಾಟಕ್ಕೆ ಸಂಕಟ ಅನುಭವಿಸುತ್ತಿದ್ದರು.ಇದೀಗ ಕಬ್ಬಿನಾಲೆ ಕಟ್ಟಿನಾಡಿಗೆ ಸಂಪರ್ಕಿಸುವ ಸೇತುವೆಗೆ ಸರಕಾರದಿಂದ ಅನುದಾನ ಮಂಜೂರಾಗಿದೆ.

ಇವತ್ತು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅಗಮಿಸಿ ಸ್ಥಳ ವೀಕ್ಷಣೆ ನಡೆಸಿದರು. ಈ ಸೇತುವೆ ನಿರ್ಮಾಣದಿಂದ ನೂರಾರು ಮನೆಯವರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ. ಅನುದಾನ ಬಿಡುಗಡೆಗೆ ಸಹಕರಿಸಿದ ಶಾಸಕ ಸುಕುಮಾರ ಶೆಟ್ಟಿ, ಸಂಸದ ಬಿ.ವೈ ರಾಘವೇಂದ್ರ ಗೆ ಗ್ರಾಮಸ್ಥರು ಧನ್ಯವಾದ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

06/01/2022 01:35 pm

Cinque Terre

12.78 K

Cinque Terre

2

ಸಂಬಂಧಿತ ಸುದ್ದಿ