ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಂಚನಕೆರೆ: 'ಅಪಘಾತ ವಲಯ' ಹೆದ್ದಾರಿ ಬದಿಯ ಹುಲ್ಲು ಗಿಡಗಂಟಿ ತೆರವು

'ಪಬ್ಲಿಕ್ ನೆಕ್ಸ್ಟ್' ವರದಿ ಫಲಶ್ರುತಿ

ಮುಲ್ಕಿ: ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ತಿರುವಿನ ಹೆದ್ದಾರಿ ಬದಿ ಹುಲ್ಲು ಗಿಡಗಂಟಿ ಬೆಳೆದು, ಎದುರಿನ ವಾಹನ ಕಾಣಿಸದೆ ನಿರಂತರ ಅಪಘಾತ ಸಂಭವಿಸುತ್ತಿರುವುದರ ಹಿನ್ನೆಲೆಯಲ್ಲಿ ಕಾರ್ನಾಡು ಶ್ರೀರಾಮ ಸೇವಾ ಮಂಡಳಿ ಸದಸ್ಯರು ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ನೇತೃತ್ವದಲ್ಲಿ ಪರಿಸರ ಸ್ವಚ್ಛಗೊಳಿಸಿದರು.

ಮಳೆಗಾಲ ಬಳಿಕ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿ ಬದಿ ಹುಲ್ಲು ಗಿಡಗಂಟಿ ಬೆಳೆದು ವಾಹನ ಸಂಚಾರ ದುಸ್ತರವಾಗಿತ್ತು. ಕಿನ್ನಿಗೋಳಿ- ಮುಲ್ಕಿ ರಾಜ್ಯ ಹೆದ್ದಾರಿಯಲ್ಲಿ ಅನೇಕ ತಿರುವುಗಳಿದ್ದು, ಎದುರಿನಲ್ಲಿ ಬರುವ ವಾಹನ ಕಾಣಿಸದೆ ಹಲವು ಅಪಘಾತಗಳು ಸಂಭವಿಸಿದ್ದರ ಬಗ್ಗೆ 'ಪಬ್ಲಿಕ್ ನೆಕ್ಸ್ಟ್' ವರದಿ ಮಾಡಿತ್ತು.

ಈಗಲೂ ರಾಜ್ಯ ಹೆದ್ದಾರಿಯ ಕೆಂಚನಕೆರೆ ಶಾಲೆ ಬಳಿ ಗಿಡ- ಪೊದೆ ಬೆಳೆದಿದ್ದು, ಚರಂಡಿ ವ್ಯವಸ್ಥೆಯೂ ಇಲ್ಲದೆ ರಸ್ತೆ ಹೊಂಡಮಯವಾಗಿದೆ. ಇಲಾಖೆ ಎಚ್ಚೆತ್ತು ಶೀಘ್ರ ದುರಸ್ತಿ ಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

02/01/2022 10:00 pm

Cinque Terre

15.17 K

Cinque Terre

0