ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಳತ್ತೂರು ಗ್ರಾಮದ ಗುಡ್ಡೆಯಂಗಡಿ ಎಸ್ ಸಿ ಕಾಲೋನಿ ರಸ್ತೆ ಕಳೆದ ಕೆಲ ವರ್ಷಗಳಿಂದ ಡಾಮರೀಕರಣಕ್ಕೆ ಬಕ ಪಕ್ಷಿಯಂತೆ ಕಾಯುತ್ತಿದ್ದು ಸಂಚಾರ ತ್ರಾಸದಾಯಕ ವಾಗಿ ಪರಿಣಮಿಸಿದೆ.
ಈ ಪರಿಸರದ ಎಸ್ಸಿ ಕಾಲೋನಿಯಲ್ಲಿ ಸುಮಾರು ಆರು ಕುಟುಂಬಗಳಿದ್ದು ರಸ್ತೆ ಅವ್ಯವಸ್ಥೆ ಯಿಂದ ಕಂಗಾಲಾಗಿದ್ದಾರೆ. ಬಪ್ಪನಾಡು- ಏಳಿಂಜೆ ಲೋಕೋಪಯೋಗಿ ರಸ್ತೆಯ ಗುಡ್ಡೆಯಂಗಡಿ ಬಳಿ ಕವಲೊಡೆಯುವ ಈ ರಸ್ತೆ ಕಚ್ಚಾ ಮಣ್ಣಿನ ರಸ್ತೆಯಾಗಿದ್ದು ಸಂಚಾರ ದುಸ್ತರವಾಗಿದೆ.
ಈ ಬಗ್ಗೆ ಅನೇಕ ಬಾರಿ ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದ್ದರೂ ಇದುವರೆಗೂ ಎಸ್ ಸಿ ಕಾಲೋನಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರಾದ ನಾರಾಯಣ ಆರೋಪಿಸಿದ್ದಾರೆ. ಸರಕಾರ ಹಿಂದುಳಿದವರ್ಗದವರಿಗೆ ರಸ್ತೆ ಸಹಿತ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದರೂ ಸ್ಥಳೀಯ ಆಡಳಿತ ಅನುಷ್ಠಾನಗೊಳಿಸಲು ಮುಂದಾಗುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಿನ್ನಿಗೋಳಿ ಗ್ರಾಪಂ ಮಾಜಿ ಸದಸ್ಯ ಪ್ರಕಾಶ್ ಹೆಗ್ಡೆ ಮಾತನಾಡಿ ರಸ್ತೆ ಅವ್ಯವಸ್ಥೆ ಬಗ್ಗೆ ಹಿಂದಿನ ಕಿನ್ನಿಗೋಳಿ ಪಂಚಾಯತ್ ಗಮನಕ್ಕೆ ತಂದಿದ್ದು ಎಸ್ಸಿ ಕಾಲೋನಿ ಅಭಿವೃದ್ಧಿಗೆ ಸಂಬಂಧಪಟ್ಟವರ ಗಮನ ಸೆಳೆಯಲಾಗಿದೆ ಎಂದರು.
Kshetra Samachara
23/12/2021 03:53 pm