ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಅಪಾಯಕಾರಿ ಹೆಜ್ಜೇನು ಗೂಡು ತೆರವು

ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ರಾಜ್ಯ ಹೆದ್ದಾರಿ ಬಳಿಯ ರಾಜ್ ಹೆರಿಟೇಜ್ ಬಹುಮಹಡಿ ಕಟ್ಟಡದಲ್ಲಿದ್ದ ಹೆಜ್ಜೇನಿನ ಗೂಡನ್ನು ಕಾರ್ಯಾಚರಣೆಯೊಂದರಲ್ಲಿ ತೆರವುಗೊಳಿಸಲಾಗಿದೆ.

ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮೂರುಕಾವೇರಿ ರಾಜ್ಯ ಹೆದ್ದಾರಿ ಬಳಿಯ ರಾಜ್ ಹೆರಿಟೇಜ್ ಎಂಬ ಬಹುಮಹಡಿ ಕಟ್ಟಡದಲ್ಲಿದ್ದ ಹೆಜ್ಜೇನಿನ ಗೂಡಿಗೆ ಗಿಳಿಯೊಂದು ಕುಕ್ಕಿದ ಕಾರಣ ಜೇನುನೊಣಗಳು ಹೆದ್ದಾರಿಯಲ್ಲಿ ನಡೆದುಕೊಂಡು ಹಾಗೂ ಬೈಕಿನಲ್ಲಿ ಹೋಗುತ್ತಿದ್ದ ಸುಮಾರು ಎಂಟು ಮಂದಿಗೆ ಕಚ್ಚಿ ಗಂಭೀರ ಗಾಯಗೊಂಡು ಕಿನ್ನಿಗೊಳಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಳಿಕ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯಿಶ್ ಚೌಟ ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಜ್ಜೇನಿನ ಗೂಡು ತೆರವುಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿದರು.

ಅದರಂತೆ ರಾತ್ರಿ ಬಹುಮಹಡಿ ಕಟ್ಟಡದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಹೆಜ್ಜೇನಿನ ಗೂಡನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.

ಹೆಜ್ಜೇನು ಕಚ್ಚಿ ಗಂಭೀರ ಗಾಯಗೊಂಡಿದ್ದ ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/12/2021 03:41 pm

Cinque Terre

8.05 K

Cinque Terre

0

ಸಂಬಂಧಿತ ಸುದ್ದಿ