ಮುಲ್ಕಿ : ಗ್ರಾಮೀಣ ಪ್ರದೇಶಗಳಾದ ಮೆನ್ನ ಬಿಟ್ಟು ಹಾಗೂ ಕಟೀಲು ಪಂಚಾಯತನ್ನು ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಿಂದ ಕೈಬಿಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮೆನ್ನ ಬೆಟ್ಟು ಗ್ರಾಪಂ ಮಾಜೀ ಅಧ್ಯಕ್ಷ ಸಂಜೀವ ಮಡಿವಾಳ ಹೇಳಿದರು.
ಅವರು ಉಲ್ಲಂಜೆ ಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ರದ್ದುಗೊಳಿಸಬೇಕು ಎಂಬ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿ ಈ ನಿಟ್ಟಿನಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ರ ಮನ ಓಲೈಸಬೇಕು. ಸಾಧ್ಯವಾಗದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗೋಣ. ವಿಧಾನ ಸೌಧದ ಎದುರು ಪ್ರತಿಭಟಿಸಲು ಮುಂದಾಗೋಣ ಎಂದರು.
ಕಟೀಲು ಹಾಗೂ ಮೆನ್ನಬೆಟ್ಟು ಗ್ರಾಮಪಂಚಾಯತ್ ಗಳು ತೀರಾ ಗ್ರಾಮೀಣ ಪ್ರದೇಶಗಳಾಗಿದ್ದು, ಪಟ್ಟಣ ಪಂಚಾಯತ್ ವಿರೋಧಿಸಿ ಆರು ಸಾವಿರ ಮಂದಿ ಸಹಿ ಹಾಕಿದ್ದಾರೆ ಎಂದರು. ಕಟೀಲು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿರಣ್ ಶೆಟ್ಟಿ ಪಟ್ಟಣ ಪಂಚಾಯತ್ ರದ್ದುಗೊಳಿಸುವ ಕಾನೂನು ಹೋರಾಟಕ್ಕೆ ರೂ. 25000 ದೇಣಿಗೆ ಘೋಷಿಸಿದರು.
ದೇವೀಪ್ರಸಾದ್ ಶೆಟ್ಟಿ, ಕೊಡೆತ್ತೂರು ವೇದವ್ಯಾಸ ಉಡುಪ, ಜಯರಾಮ ಮುಕ್ಕಾಲ್ದಿ, ನಿವೃತ್ತ ಶಿಕ್ಷಕ ಕೆ.ವಿ.ಶೆಟ್ಟಿ. ಗ್ರಾ.ಪಂ. ಮಾಜಿ ಸದಸ್ಯರಾದ ಕಿರಣ್ ಶೆಟ್ಟಿ. ರೋನಿ ಡಿಸೋಜ, ಲಕ್ಷ್ಮಿ. ಮಲ್ಲಿಕಾ, ದಯಾನಂದ ಶೆಟ್ಟಿ. ಸುನಿಲ್ ಸಿಕ್ವೇರ, ಕಿಸಾನ್ ಸಂಘದ ಪುರುಷೋತ್ತಮ ಕೋಟ್ಯಾನ್. ಶಶಿಧರ ಶೆಟ್ಟಿ, ಪ್ರಕಾಶ್ ಆಚಾರ್. ಸಂದೀಪ್ ಮತ್ತಿತರರಿದ್ದರು.
ಕಿನ್ನಿಗೊಳಿ ಪಟ್ಟಣ ಪಂಚಾಯತ ರದ್ದತಿಗೆ ರಾಜಕೀಯ ರಹಿತ ಸಭೆಗಳು ಅಲ್ಲಲ್ಲಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟದ ಕಾವು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿದೆ.
Kshetra Samachara
19/12/2021 10:13 pm