ವಂಡ್ಸೆ: ಜಿಲ್ಲೆಯ ವಂಡ್ಸೆ ಪೇಟೆಯ ಅನತಿ ದೂರದಲ್ಲಿರುವ ಕಾನಮ್ಮ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಅಡಿಕೆಕೋಡ್ಲು ಸಂಧಿಸುವ ರಸ್ತೆ ಅವ್ಯವಸ್ಥೆ ಊರ ಜನರಿಗೆ ಶಾಪವಾಗಿ ಪರಿಣಮಿಸಿದೆ.ಹಲವು ವರ್ಷಗಳಿಂದ ಈ ಭಾಗರ ರಸ್ತೆ ಸುಧಾರಣೆ ಕಂಡಿಲ್ಲ.ನಿತ್ಯ ಕೆಸರು ಹೊಂಡ ತುಂಬಿದ ರಸ್ತೆಯಲ್ಲೇ ಜನರು ಮತ್ತು ವಾಹನ ಸವಾರರು ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಳೆಗಾಲದಲ್ಲಂತೂ ರಸ್ತೆ ಕೆಸರು ರಾಡಿಯಾಗಿ ಜನ ಈ ರಸ್ತೆಯಲ್ಲೇ ಬರುವುದನ್ನು ಬಿಟ್ಟಿದ್ದಾರೆ.ಇದು ಸ್ಥಳೀಯ ಪಂಚಾಯತ್ ಅಧ್ಯಕ್ಷರ ವಾರ್ಡ್ ರಸ್ತೆ ಎಂಬುದು ಇನ್ನೂ ಗಮನಾರ್ಹ ಸಂಗತಿ. ಪ್ರತಿ ಚುನಾವಣಾ ಸಮಯದಲ್ಲೂ ಓಟು ಕೇಳಲು ಬರುವ ಜನಪ್ರತಿನಿಧಿಗಳು ಭರವಸೆ ಕೊಟ್ಟು ಹೋಗುತ್ತಾರೆ.ಪ್ರತಿ ಗ್ರಾಮ ಸಭೆಯಲ್ಲೂ ಈ ರಸ್ತೆ ಬಗ್ಗೆ ಚರ್ಚೆಯಾಗುತ್ತದೆ. ಆದರೆ ಫಲಿತಾಂಶ ಮಾತ್ರ ಶೂನ್ಯ ಎನ್ನುತ್ತಾರೆ ಸ್ಥಳೀಯರು.ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು ಈ ರಸ್ತೆಯನ್ನು ಸಂಚಾರಕ್ಕೆ ಯೋಗ್ಯ ಮಾಡಿಕೊಡಬೇಕಿದೆ.
Kshetra Samachara
12/12/2021 12:53 pm