ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಪೈಪ್ ಮೇಲೆಯೇ ಜೆಸಿಬಿ ಸವಾರಿ!; ನೀರು ಪೋಲು, ಸ್ಥಳೀಯರ ಅಳಲು

ಸುಳ್ಯ: ಇಲ್ಲಿನ ಜಯನಗರ ಕುಡಿಯುವ ನೀರು ಸರಬರಾಜಿನ ಮುಖ್ಯ ಪೈಪಿನ ಮೇಲೆ ಜೆಸಿಬಿ ಚಲಿಸಿ ಪೈಪ್ ಮುರಿದು ನೀರು ಪೋಲಾಗುತ್ತಿದೆ.

ಮಿಲಿಟರಿ ಗ್ರೌಂಡ್ ಸಮೀಪ ಜಾಗದ ಸಮತಟ್ಟು ಮಾಡಲು ಜೆಸಿಬಿ ಕೊಂಡೊಯ್ಯುವ ಸಂದರ್ಭ ಅದು ಕುಡಿಯುವ ನೀರಿನ ಸಂಪರ್ಕದ ಪೈಪಿನ ಮೇಲೆಯೇ ಚಲಿಸಿ ಪೈಪು ತುಂಡಾಗಿ ಬಹಳಷ್ಟು ನೀರು ಪೋಲಾಗುತ್ತಿದೆ.

ಈ ಕಾರಣದಿಂದ ಜಯನಗರ ಪರಿಸರದ ಹಲವಾರು ಮನೆಗಳಿಗೆ ನೀರು ಬಾರದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ದಿನಗಳಿಂದ ಜಯನಗರದ ರುದ್ರಭೂಮಿ ಪರಿಸರದಲ್ಲಿರುವ ಹತ್ತು ಹಲವಾರು ಮನೆಗಳಿಗೆ ನೀರು ಬಾರದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

06/12/2021 04:33 pm

Cinque Terre

6.92 K

Cinque Terre

0

ಸಂಬಂಧಿತ ಸುದ್ದಿ