ಮುಲ್ಕಿ: ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡು ಗೇರುಕಟ್ಟೆ ಜಂಕ್ಷನ್ ಅಪಾಯಕಾರಿಯಾಗಿದ್ದು ಸಂಚಾರ ದುಸ್ತರವಾಗಿದೆ.
ಸದಾ ಜನನಿಬಿಡ ಪ್ರದೇಶವಾಗಿರುವ ಗೇರುಕಟ್ಟೆ ಜಂಕ್ಷನ್ ಬಳಿ ಶಾಲಾ ಕಾಲೇಜು ಹೋಗುವ ಮಕ್ಕಳಿಗೆ ಸಂಚಾರ ತ್ರಾಸದಾಯಕ ವಾಗಿ ಪರಿಣಮಿಸಿದೆ
ಗೇರುಕಟ್ಟೆ ಜಂಕ್ಷನ್ ಬಳಿಯ ಬಸ್ಸುನಿಲ್ದಾಣದ ತುಂಬಾ ಹುಲ್ಲಿನ ಪೊದೆಗಳು ಆವರಿಸಿದ್ದು ಗೇರುಕಟ್ಟೆ ಒಳ ಬದಿಯಿಂದ ಬರುವ ವಾಹನಗಳಿಗೆ ರಾಜ್ಯ ಹೆದ್ದಾರಿಯಿಂದ ಸಂಚರಿಸುತ್ತಿರುವ ವಾಹನಗಳು ಕಾಣಿಸದೆ ಅನೇಕ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ.
ಗೇರುಕಟ್ಟೆ ಜಂಕ್ಷನ್ ನ ಒಳಬದಿಯಲ್ಲಿ ಹಾಗೂ ರಾಜ್ಯ ಹೆದ್ದಾರಿ ಬದಿಯಲ್ಲಿ ಶಾಲಾ-ಕಾಲೇಜುಗಳು ಇದ್ದು ಬೆಳಗಿನ ಜಾವ 9ಗಂಟೆಗೆ ಹಾಗೂ ಸಂಜೆ ನಾಲ್ಕು ಗಂಟೆ ಶಾಲಾ-ಕಾಲೇಜುಗಳು ಬಿಡುವ ವೇಳೆಯಲ್ಲಿ ಸಂಚಾರಿ ಪೊಲೀಸರ ಅಗತ್ಯವಿದೆ.
ಅದೇ ರೀತಿ ಈ ಭಾಗದಲ್ಲಿ ಶಾಲಾ ಮಕ್ಕಳು ಪರವಾನಿಗೆ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಕುಳಿತುಕೊಂಡು ರಾಜಾರೋಷವಾಗಿ ಪ್ರಯಾಣಿಸುತ್ತಿದ್ದು ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ.
ಕೂಡಲೇ ಗೇರುಕಟ್ಟೆ ಜಂಕ್ಷನ್ ಬಳಿ ಟ್ರಾಫಿಕ್ ಪೊಲೀಸರನ್ನು ನೇಮಿಸುವುದರ ಜೊತೆಗೆ ಹೆದ್ದಾರಿ ಬದಿಯ ಹುಲ್ಲಿನ ಪೊದೆ ಗಳನ್ನು ತೆಗೆಯಲು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
04/12/2021 11:24 am