ಉಡುಪಿ : ಉಡುಪಿ ವಿಧಾನಸಭೆ ಕ್ಷೇತ್ರದ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ತ್ರಿಶಾ ಕಾಲೇಜಿನಿಂದ ಜಯ ಪಾತ್ರಿ ಮನೆಯವರೆಗಿನ ರಸ್ತೆ ಅಭಿವೃದ್ಧಿಗೆ ಶಾಸಕರಾದ ರಘುಪತಿ ಭಟ್ ಶಿಫಾರಸ್ಸಿನ ಮೇರೆಗೆ ರೂ. 50 ಲಕ್ಷ ಮಂಜೂರಾಗಿರುತ್ತದೆ. ಈ ರಸ್ತೆ ಹಾದುಹೋಗುವಲ್ಲಿ ಖಾಸಗಿ ಜಾಗ ಇರುವುದರಿಂದ ಇಂದು ಶಾಸಕ ಕೆ. ರಘುಪತಿ ಭಟ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಳಿಕ ಖಾಸಗಿ ಜಾಗದವರೊಂದಿಗೆ ಚರ್ಚಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ರಸ್ತೆ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಉಪಾಧ್ಯಕ್ಷರಾದ ಉದಯ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ನವೀನ್ ಕಾಂಚನ್, ಸತೀಶ್ ನಾಯ್ಕ್ ಹಾಗೂ ಪಕ್ಷದ ಹಿರಿಯರಾದ ಅಪ್ಪು ಜತ್ತನ್, ಕಾರ್ಯಕರ್ತರಾದ ಹರೀಶ್ ಪೂಜಾರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Kshetra Samachara
24/11/2021 08:32 pm