ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಾರ್ಕೂರಿನಲ್ಲಿ ಮತ್ಸ್ಯಗಂಧ ರೈಲು ನಿಲುಗಡೆ ಮಾಡಿ: ನಿಲ್ದಾಣ ಮೇಲ್ದರ್ಜೆಗೇರಿಸಿ: ಹೋರಾಟ ಸಮಿತಿ

ಬಾರ್ಕೂರು: ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದ ಮುಂಬಯಿ - ಮಂಗಳೂರು ಮತ್ಸ್ಯಗಂಧ ರೈಲು ಈಗ ನಿಲ್ಲುತ್ತಿಲ್ಲ.ಹಿಂದೆ ನಿಲ್ಲುತ್ತಿದ್ದ ರೈಲು ಕೋವಿಡ್ ಬಳಿಕ ನಿಲುಗಡೆ ಮಾಡದ ಕಾರಣ ಬಾರ್ಕೂರು ರೈಲು ನಿಲುಗಡೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾಲೋಚನಾ ಸಭೆ ಜರುಗಿತು.

ಈ ಸಂದರ್ಭ ಇಲ್ಲಿನ ಪರಿಸರದ ದೇವಸ್ಥಾನ , ಮಸೀದಿ ,ಚರ್ಚ, ಸಂಘ ಸಂಸ್ಥೆಯ ಮುಖಂಡರುಗಳು ಭಾಗವಹಿಸಿ ಅಭಿಪ್ರಾಯ ವ್ಯಕ್ತ ಪಡಿಸಿ,ಬಾರ್ಕೂರು ನಾಗರಿಕರು ಮಾತ್ರವಲ್ಲ, ಮುಂಬಯಿ ಬೆಂಗಳೂರು ಭಾಗದಲ್ಲಿರುವ ಇಲ್ಲಿನ ಜನರ ಮೂಲಕ ರೈಲ್ವೆ ಇಲಾಖೆಗೆ ಒತ್ತಡ ಹೇರುವ ಕಾರ್ಯ ಮಾಡಿ ಮತ್ಸ್ಯಗಂಧ ರೈಲು ನಿಲುಗಡೆ ಸೇರಿದಂತೆ ಅನೇಕ ಸಮಸ್ಯೆಯನ್ನು ಬಗೆಹರಿಸಲು ಬೆಂಬಲ ವ್ಯಕ್ತ ಪಡಿಸಿದರು.

ಹೋರಾಟದ ನೇತೃತ್ವ ವಹಿಸಿದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡಿ, ರೈಲು ನಿಲುಗಡೆಯಾಗಬೇಕು ಎನ್ನುವ ಇಚ್ಚೆ ಎಲ್ಲ ಜನರೀಗೆ ಇದೆ. ಆದರೆ ಹೋರಾಟಕ್ಕೆ ಜನ ಮುಂದೆ ಬಾರದೇ ಇರುವುದರಿಂದಾಗಿ ರೈಲು ನಿಲ್ದಾಣ ಅನೇಕ ಸಮಸ್ಯೆಯನ್ನು ಎದುರಿಸುವಂತಾಗಿದೆ. ಸಮಸ್ಯೆಯನ್ನು ಮನವಿ ಮೂಲಕ ಸಂಬಂಧಪಟ್ಟವರಿಗೆ ಮಾಡಿ 15 ದಿನ ಅವಧಿ ನೀಡೋಣ. ಮನವಿಗೆ ಸ್ಫಂದಿಸದಿದ್ದಲ್ಲಿ ಮತ್ತೆ ಹೋರಾಟ ಮಾಡಬೇಕು.ಒಟ್ಟಿನಲ್ಲಿ ಬಾರ್ಕೂರಿನಲ್ಲಿ ಮತ್ಸ್ಯಗಂಧ ರೈಲು ನಿಲುಗಡೆ ಮಾಡುವುದಲ್ಲದೆ ನಿಲ್ದಾಣ ಮೇಲ್ದರ್ಜೆ ಮಾಡುವಂತೆ ನಿಮ್ಮ ಸಹಕಾರ ಇದ್ದರೆ ನಾನು ನೇತೃತ್ವ ವಹಿಸುತ್ತೇನೆ ಎಂದರು.

ರೈಲು ನಿಲುಗಡೆಯಾಗದೆ ಇತಿಹಾಸ ಪ್ರಸಿದ್ದ ದೇವಾಲಯಗಳ ನಗರ ಬಾರ್ಕೂರಿಗೆ ಬರುವ ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಹಾಗೂ ಸುತ್ತಮುತ್ತಲಿನ 20 ಕಿಮೀ ದೂರದ ಜನರಿಗೆ ತುಂಬ ತೊಂದರೆ ಅನುಭವಿಸಬೇಕಾಗುವುದನ್ನು ತಪ್ಪಿಸಲು 100 ಸಂಘ ಸಂಸ್ಥೆಗಳು ಜೊತೆಯಾಗಿವೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ , ಪರಿಸರದ ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಚಂದ್ರಶೇಖರ್ ಶೆಟ್ಟಿ, ಪಾಂಡುರಂಗ ಶೆಟ್ಟಿ, ಲತಾ, ಉದಯ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/11/2021 05:03 pm

Cinque Terre

22.53 K

Cinque Terre

1