ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 'ಮಂಗಳೂರು ನಗರ' ರಾಜ್ಯ, ಹೊರರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಕೇಂದ್ರ. ಅದ್ರಲ್ಲೂ ಉತ್ತರ ಕೇರಳದ ಸಾವಿರಾರು ವಿದ್ಯಾರ್ಥಿಗಳು ದಶಕಗಳಿಂದ ವಿದ್ಯಾಭ್ಯಾಸಕ್ಕಾಗಿ ಮಂಗಳೂರನ್ನು ಆಶ್ರಯಿಸಿದ್ದಾರೆ.
ಈ ವಿದ್ಯಾರ್ಥಿಗಳು ದಿನನಿತ್ಯ ರೈಲು ಮೂಲಕ ಮಂಗಳೂರಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೆ, ಕಳೆದ ಒಂದು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಕಣ್ಣೂರು ಮತ್ತು ಮಂಗಳೂರು ನಡುವೆ ರೈಲು ಓಡಾಡುತ್ತಿಲ್ಲ. ಇದೀಗ ಕಾಲೇಜು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ನಿತ್ಯ ಕಾಲೇಜಿಗೆ ಓಡಾಡಲು ಬಸ್ಸನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ.
ದಿನಂಪ್ರತಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದು- ಹೋಗಲು 150 ರೂ. ವೆಚ್ಚವಾಗುತ್ತಿದ್ದು, ಈ ದುಬಾರಿ ವೆಚ್ಚ ಭರಿಸಲು ವಿದ್ಯಾರ್ಥಿಗಳಿಂದ ಸಾಧ್ಯವಾಗುತ್ತಿಲ್ಲ ಮತ್ತು ಇದರಿಂದಾಗಿ ವಿದ್ಯಾರ್ಥಿಗಳು ವಾರಕ್ಕೆ 2-3 ದಿನ ಮಾತ್ರ ಕಾಲೇಜಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೂಡಲೇ ಕಣ್ಣೂರು - ಮಂಗಳೂರು ನಡುವಿನ ರೈಲು ಸಂಚಾರ ಪುನಾರಂಭಿಸಿ, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕೆಂದು ವಿದ್ಯಾರ್ಥಿ ಸಂಘಟನೆ ಮಂಗಳೂರು ರೈಲು ನಿಲ್ದಾಣ ಮುಂಭಾಗ ಇಂದು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿತು.
Kshetra Samachara
20/11/2021 07:06 pm