ಮುಲ್ಕಿ: ಕಳೆದ ಹಲವಾರು ವರ್ಷಗಳಿಂದ ಕೆಟ್ಟು ಕೆರ ಹಿಡಿದಿರುವ ಮುಲ್ಕಿ ಪೊಲೀಸ್ ಠಾಣೆ ಹಾಗೂ ಸಬ್ ರಿಜಿಸ್ಟರ್ ಕಚೇರಿಗೆ ಹೋಗುವ ರಸ್ತೆ ಮುಗಿಯದ ಗೋಳಾಗಿ ಪರಿಣಮಿಸಿದ್ದು ಕೂಡಲೇ ದುರಸ್ತಿ ಪಡಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ
ಸದಾ ಜನಸಂದಣಿಯಿಂದ ಕೂಡಿರುವ ಮುಲ್ಕಿ ಠಾಣೆ ಹಾಗೂ ಸಬ್ ರಿಜಿಸ್ಟರ್ ಆಫೀಸಿಗೆ ದಿನನಿತ್ಯದ ಕೆಲಸಗಳನ್ನು ಪೂರೈಸಲು ಬರುವ ನಾಗರಿಕರು ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ರಸ್ತೆಯಲ್ಲಿ ರಿಕ್ಷಾದವರು ಬಾಡಿಗೆ ಬರಲು ನಿರಾಕರಿಸುತ್ತಿದ್ದು ನಾಗರಿಕರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸ್ಥಳೀಯ ನಗರ ಪಂಚಾಯತ್ ಸದಸ್ಯ ಬಾಲಚಂದ್ರ ಕಾಮತ್ ಮಾತನಾಡಿ ರಸ್ತೆ ಡಾಮರೀಕರಣ 5 ಲಕ್ಷ ಮಂಜೂರಾಗಿದ್ದು ಮಳೆಗಾಲ ಮುಗಿದ ಕೂಡಲೇ ಡಾಮರೀಕರಣ ನಡೆಸಲಾಗುವುದು. ಹಾಗೂ ಈ ರಸ್ತೆಯ ಮುಂದುವರಿದ ಕಾಮಗಾರಿಗಾಗಿ ಹಳೆ ಬೋರ್ಡ್ ಶಾಲೆ ಮೂಲಕ ಶಾಲೆದ ಬೆಟ್ಟು ಸತ್ಯ ದೇವತೆ ಮಂದಿರದವರೆಗೆ ನೂತನ ಕಚ್ಚಾ ರಸ್ತೆ ಕಾಮಗಾರಿ ನಿರ್ಮಾಣದ ಯೋಜನೆ ಇದೆ ಎಂದರು.
Kshetra Samachara
18/11/2021 01:54 pm