ಬಂಟ್ವಾಳ: ಬಂಟ್ವಾಳ ಮೂಡ ಗ್ರಾಮದ ಪುಂಜರಕೋಡಿ ಎಂಬಲ್ಲಿ ಸುಮಾರು ಎರಡು ವರ್ಷಗಳಿಂದ ನೀರು ಪೋಲಾಗುತ್ತಿರುವ ಕುರಿತು ಸ್ಥಳೀಯರು ದೂರಿದ್ದಾರೆ. ಈ ಕುರಿತು ಸ್ಥಳೀಯ ನಿವಾಸಿಗಳು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಾರಾಯಣಗುರು ಮಂದಿರ ಬಳಿ ಪುಂಜರಕೋಡಿ ಕಾಂಕ್ರೀಟ್ ರಸ್ತೆಯ ಎಡಭಾಗದಲ್ಲಿ ಮಣ್ಣಿನ ರಸ್ತೆಯಲ್ಲಿ ಸುಮಾರು ಎರಡು ವರ್ಷಗಳಿಂದ ಪುರಸಭೆಯ ನೀರು ಹರಿದುಹೋಗುತ್ತಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದ್ದು, ಈ ಕುರಿತು ಹಲವು ಬಾರಿ ಇಂಜಿನಿಯರ್, ಮುಖ್ಯಾಧಿಕಾರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿರುವ ಸ್ಥಳೀಯರು ಇದು ನಮಗೆ ಸಂಬಂಧಿಸಿದ್ದಲ್ಲ, ಕಾಮಗಾರಿ ನಡೆಸಿದ ಇಲಾಖೆಯದ್ದು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದು, ಆ ಇಲಾಖೆಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ. ಹೀಗಾಗಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ವಿನಂತಿಸಿದ್ದಾರೆ. ಈ ಬಗ್ಗೆ ಶಾಸಕರ ಕಚೇರಿಗೂ ಮನವಿ ಸಲ್ಲಿಸಿದ್ದಾಗಿ ಪ್ರಭಾಕರ ಆಚಾರ್ಯ ಮತ್ತು ಸ್ಥಳೀಯರು ತಿಳಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.
Kshetra Samachara
12/11/2021 06:51 pm