ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿಯ ಹೆದ್ದಾರಿ ಬದಿ ಸೂಕ್ತ ಸರ್ವಿಸ್ ರಸ್ತೆ ಇಲ್ಲದೆ ಹೊಂಡ ಮಯವಾಗಿ ಪರಿಣಮಿಸಿದ್ದು ಸ್ಥಳೀಯ ಹೋಟೆಲ್ ಮಾಲೀಕರು ತಮ್ಮ ಸ್ವಂತ ಖರ್ಚಿನಿಂದ ದುರಸ್ತಿ ಪಡಿಸಿದ್ದಾರೆ.
ಮುಲ್ಕಿ ಬಸ್ಸು ನಿಲ್ದಾಣದ ಕೆಳಬದಿ ಹೋಟೆಲ್ ಲಲಿತ್ ಎದುರು ಭಾಗ ಸೂಕ್ತ ಸರ್ವಿಸ್ ರಸ್ತೆ ಹಾಗೂ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿ ಹೊಂಡ ಮಾಯವಾಗಿ ಅಪಾಯಕಾರಿಯಾಗಿ ಪರಿಣಮಿಸಿದ್ದು ಹೆದ್ದಾರಿ ಇಲಾಖೆಯ ನಿರ್ಲಕ್ಷದಿಂದ ಅಪಘಾತಗಳು ಸಂಭವಿಸಿದ್ದವು.
ಮುಲ್ಕಿ ಹೆದ್ದಾರಿ ಸರ್ವಿಸ್ ರಸ್ತೆ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಶಾಸಕರಿಗೆ ಹಾಗೂ ಸಂಸದರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಮಂಗಳವಾರ ಬೆಳಿಗ್ಗೆ ಸ್ಥಳೀಯ ಹೋಟೆಲ್ ಲಲಿತ್ಮಹಲ್ ಕಟ್ಟಡದ ಮಾಲೀಕ ಹರಿಶ್ಚಂದ್ರ ವಿ. ಕೋಟ್ಯಾನ್ ತಾತ್ಕಾಲಿಕ ನೆಲೆಯಲ್ಲಿ ಟಿಪ್ಪರ್ ಮೂಲಕ ಮಣ್ಣು ಹಾಕಿಸಿ ರಾಷ್ಟ್ರೀಯ ಹೆದ್ದಾರಿ ಬದಿಯ ಅಪಾಯಕಾರಿ ಹೊಂಡವನ್ನು ಮುಚ್ಚಿಸಿ ಮಾದರಿಯಾಗಿದ್ದಾರೆ.
ಕಳೆದ ಹಲವಾರು ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಅರ್ಧಂಬರ್ಧ ಕಾಮಗಾರಿ ನಡೆದಿದ್ದು ಮೂಲ್ಕಿ ಬಸ್ ನಿಲ್ದಾಣ ಜಂಕ್ಷನ್, ಹಳೆ ವಿಜಯ ಬ್ಯಾಂಕ್ ಬಳಿ, ಬಪ್ಪನಾಡು ಜಂಕ್ಷನ್ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಪರಿಸರದಲ್ಲಿ ಅಪಘಾತಗಳು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲೇ ಹೆದ್ದಾರಿ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
09/11/2021 07:42 pm