ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು-ಬೆಂಗಳೂರು ರಾ.ಹೆ. ಕಾಮಗಾರಿ ಮತ್ತೆ ಆರಂಭ

ಪುತ್ತೂರು: ಬಂದರು ನಗರಿ ಮಂಗಳೂರು ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಚತುಷ್ಪಥ ಕಾಮಗಾರಿ ಮತ್ತೆ ಆರಂಭಗೊಂಡಿದೆ.

2017 ರಲ್ಲೇ ಈ ಹೆದ್ದಾರಿಯ ಅಗಲೀಕರಣ ಕಾಮಗಾರಿ ಆರಂಭಿಸಲಾಗಿತ್ತಾದರೂ, ಬಳಿಕ ಕೆಲವು ತಾಂತ್ರಿಕ ಕಾರಣದಿಂದಾಗಿ ಕಾಮಗಾರಿ ವಹಿಸಿಕೊಂಡಿದ್ದ ಕಂಪನಿ ಅರ್ಧದಲ್ಲೇ ಕಾಮಗಾರಿ ನಿಲ್ಲಿಸಿತ್ತು. ಇದೀಗ ಮತ್ತೆ ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗಿನ ಸುಮಾರು 65 ಕಿ.ಮೀ. ರಸ್ತೆಯ ಚತುಷ್ಪಥ ಕಾಮಗಾರಿ ಆರಂಭಗೊಂಡಿದ್ದು, 2023ರ ಕೊನೆಗೆ ಈ ಕಾಮಗಾರಿ ಮುಕ್ತಾಯಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

2017 ರಲ್ಲಿ L & T ಕಂಪನಿಗೆ 821 ಕೋಟಿ ರೂ.ನ ಕಾಮಗಾರಿಯನ್ನೂ ಒಪ್ಪಿಸಲಾಗಿತ್ತು. ಇದರಲ್ಲಿ ರಸ್ತೆ ನಿರ್ಮಾಣದ ಜೊತೆಗೆ 14.5 ಕಿ.ಮೀ. ಸರ್ವೀಸ್ ರಸ್ತೆ, ಎರಡು ಫ್ಲೈ ಓವರ್, ಎರಡು ದೊಡ್ಡ ಸೇತುವೆ, 14 ಸಣ್ಣ ಸೇತುವೆ, 9 ಅಂಡರ್ ಪಾಸ್ ಹಾಗೂ ಟಾಲ್ ಪ್ಲಾಝಾವನ್ನು ಒಳಗೊಂಡಿದೆ. ಕಾಮಗಾರಿಯನ್ನು ಅತಿ ವೇಗವಾಗಿ ಆರಂಭಿಸಿದ್ದ ಕಂಪನಿಗೆ 45 ಮೀಟರ್ ರಸ್ತೆಯನ್ನು ಅಗಲೀಕರಣಗೊಳಿಸಲು ಹಲವು ತೊಡಕು ಎದುರಾಗಿತ್ತು. ನೇರ ರಸ್ತೆ ನಿರ್ಮಿಸಬೇಕಾದ ಅನಿವಾರ್ಯತೆಯಿದ್ದ ಕಾರಣ ಹಲವು ಖಾಸಗಿ ಜಮೀನುಗಳನ್ನು ಖರೀದಿಸಿ ಅವುಗಳನ್ನು ರಸ್ತೆಗಳನ್ನಾಗಿ ಪರಿವರ್ತಿಸಲಾಗಿತ್ತು.

ಈ ನಡುವೆ ಸುಮಾರು 21 ಕಿ. ಮೀ. ವ್ಯಾಪ್ತಿಯಲ್ಲಿ ಅರಣ್ಯ ಭೂಮಿ ಬಳಕೆಯ ಅನಿವಾರ್ಯತೆಯೂ ಇದ್ದ ಕಾರಣ ಅರಣ್ಯ ಇಲಾಖೆಯ ಅನುಮತಿ ಸಮಸ್ಯೆಯೂ ಎದುರಾಗಿತ್ತು. ಅಲ್ಲದೆ, ಭಾರಿ ಮಳೆ ಕಾರಣ ಬೆಟ್ಟ ಗುಡ್ಡಗಳನ್ನು ಅಗೆದು ರಸ್ತೆ ಮಾಡಿದ್ದ ರಸ್ತೆಯ ಮೇಲೆ ಮತ್ತೆ ಕಲ್ಲು ಮಣ್ಣುಗಳು ಬೀಳಲಾರಂಭಿಸಿತ್ತು. ಈ ಕಾರಣಕ್ಕಾಗಿ ಒಮ್ಮೆ ನಿರ್ಮಿಸಿದ್ದ ರಸ್ತೆಯನ್ನು ಮತ್ತೆ ನಿರ್ಮಿಸಬೇಕಾದ ಸ್ಥಿತಿಯೂ ಬಂದೊದಗಿತ್ತು. ಈ ಕಾರಣಕ್ಕಾಗಿ ಸುಮಾರು 108 ಕೋಟಿ ರೂ. ನಷ್ಟ ಪರಿಹಾರ ನೀಡುವಂತೆ ಕಂಪನಿ ಹೆದ್ದಾರಿ ಪ್ರಾಧಿಕಾರವನ್ನು ವಿನಂತಿಸಿತ್ತು.

Edited By : Manjunath H D
Kshetra Samachara

Kshetra Samachara

04/11/2021 09:11 pm

Cinque Terre

6.12 K

Cinque Terre

0

ಸಂಬಂಧಿತ ಸುದ್ದಿ