ಉಡುಪಿ : ಕಾಪು ತಾಲೂಕಿನ ಉದ್ಯಾವರ ಗ್ರಾಮ ಪಂಚಾಯತ್ ವತಿಯಿಂದ ಮನೆ ಮನೆಗಳಿಂದ ಸಂಗ್ರಹಿಸಲ್ಪಟ್ಟ ಹಸಿ ಹಾಗೂ ಒಣ ತ್ಯಾಜ್ಯವನ್ನು ಪಂಚಾಯತ್ ಬಳಿಯಿರುವ 2 ಕೊಠಡಿಗಳಲ್ಲಿ ಸಂಗ್ರಹಿಸಿಡಲಾಗಿದೆ.
ಕಸವನ್ನು ಸಂಗ್ರಹಿಸಿಟ್ಟ ಕೊಠಡಿಯ ಪಕ್ಕದ ಕೊಠಡಿಯಲ್ಲಿ ಅಂಗನವಾಡಿ ಇದ್ದು ಕಸದಿಂದ ಹುಟ್ಟಿಕೊಂಡಿರುವ ಹುಳಗಳು ಅಂಗನವಾಡಿಯ ಕೋಣೆಯೊಳಗೆ ಹರಿದಾಡುತ್ತಿದೆ. ಅದರ ವಾಸನೆಗೆ ಜನ ಸಾಮಾನ್ಯರು ಮೂಗು ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸುಮಾರು 30 ಮೀಟರ್ ವ್ಯಾಪ್ತಿಯಲ್ಲಿ ಸರಕಾರಿ ಶಾಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕಿತ್ಸಾಲಯ ಮತ್ತು ಗ್ರಂಥಾಲಯ ಇರುತ್ತದೆ. ಸಂಗ್ರಹಿಸಲ್ಪಟ್ಟ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ಹಾಗೂ ಪ್ರಮೋದ್ ಉಚ್ಚಿಲ ರವರು ಉಡುಪಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸುತ್ತಿದ್ದಾರೆ.
Kshetra Samachara
29/10/2021 09:33 pm