ಸುರತ್ಕಲ್: ಸುರತ್ಕಲ್ ಕೇಂದ್ರ ಮೈದಾನ ಬಳಿಯ ಬಾಟಾ ಶೋ ರೂಮ್‌ನಿಂದ ವೀನಸ್ ಆಸ್ಪತ್ರೆಗೆ ತೆರಳುವ ದಾರಿಯಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದುಕೊಂಡಿದ್ದು ದುರ್ವಾಸನೆಯ ವಾತಾವರಣ ಸೃಷ್ಟಿಯಾಗಿದೆ. ಈ ಪರಿಸರದಲ್ಲಿ ದನ ಗಳು ಪ್ಲಾಸ್ಟಿಕ್ ತ್ಯಾಜ್ಯ ತಿನ್ನುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು ರೋಗಗಳ ಭೀತಿ ಎದುರಾಗಿದೆ.
ವೀನಸ್ ಆಸ್ಪತ್ರೆಗೆ ಬರುವವರು ಮೂಗು ಮುಚ್ಚಿಕೊಂಡು ನಡೆದಾಡುವ ಪರೀಸ್ಥಿತಿ ಉಂಟಾಗಿದ್ದು ಆಸ್ಪತ್ರೆಗೆ ತೆರಳುವ ದಾರಿಯಲ್ಲಿ ಬಿದ್ದಿರುವ ತ್ಯಾಜ್ಯ ರಾಶಿಯನ್ನು ದನಗಳು ತಿನ್ನುತ್ತಿರುವ ದೃಶ್ಯ ಮಾಮೂಲಿಯಾಗಿದ್ದು, ಸ್ವಚ್ಛ ಭಾರತದ ಪರಿಕಲ್ಪನೆ ಕೇವಲ ಬಾಯಿಮಾತಿನಲ್ಲಿ ಮಾತ್ರ ಎಂಬ ಸ್ಥಿತಿ ಎದುರಾಗಿದೆ.
ಕೂಡಲೇ ಸುರತ್ಕಲ್ ಶಾಸಕರು ಸ್ಥಳೀಯ ಕಾರ್ಪೋರೇಟರ್ ಈ ಬಗ್ಗೆ ಗಮನಹರಿಸಿ ತ್ಯಾಜ್ಯ ವಿಲೇವಾರಿ ಮಾಡಿಸಿ ರೋಗರುಜಿನಗಳಿಂದ ಮುಕ್ತಿ ಕೊಡಿಸಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ.
Kshetra Samachara
29/10/2021 10:59 am