ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆದ್ದಾರಿ ಬದಿಗೆ ಲಾರಿಯಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆದ ಪುದು ಗ್ರಾಪಂ

ಬಂಟ್ವಾಳ: ಹೆದ್ದಾರಿ ಬದಿಯಲ್ಲಿ ಲಾರಿಯಲ್ಲಿ ತ್ಯಾಜ್ಯ ತಂದು ಎಸೆಯುವುದನ್ನು ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ನೇತೃತ್ವದಲ್ಲಿ ತಡೆದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಪುದು ಗ್ರಾಮದ ಹತ್ತನೇ ಮೈಲಿಗಲ್ಲು ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಟಿಪ್ಪರ್ ಲಾರಿಯಲ್ಲಿ 7-8 ಲೋಡ್ ನಷ್ಟು ತ್ಯಾಜ್ಯ ಹಾಕಿದ್ದನ್ನು ಗಮನಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹಾಗೂ ಸದಸ್ಯರು ಲಾರಿಯನ್ನು ನಿಲ್ಲಿಸಿ ಹಾಕಿದ ತ್ಯಾಜ್ಯವನ್ನು ಖಾಲಿ ಮಾಡಿಸಿದರು ಗ್ತಾಪಂ ಸದಸ್ಯ ಇಕ್ಬಾಲ್ ಸುಜೀರ್,, ಗ್ರಾಪಂ ಸದಸ್ಯರಾದ ಹುಸೈಲ್ ಪಾಡಿ, ಅಖ್ತರ್ ಹುಸೈನ್, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಹಾಗೂ ಸ್ಥಳೀಯ ನಾಗರಿಕರು ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದರು. ಪುದು ಗ್ರಾಪಂ ತನ್ನ ವ್ಯಾಪ್ತಿಯಲ್ಲಿ ಹೊರಗಿನಿಂದ ತ್ಯಾಜ್ಯ ತಂದು ಸುರಿಯುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುತ್ತಿದ್ದು, ಈಗಾಗಲೇ ದಂಡವನ್ನೂ ವಿಧಿಸಿದೆ.

Edited By : PublicNext Desk
Kshetra Samachara

Kshetra Samachara

16/10/2021 05:02 pm

Cinque Terre

5.18 K

Cinque Terre

0