ಸುರತ್ಕಲ್: ಸುರತ್ಕಲ್ ಸಮೀಪದ ಸೂರಿಂಜೆ ದೇಲಂತಬೆಟ್ಟು ಶಕ್ತಿ ಕೇಂದ್ರದ ಬಿಜೆಪಿ ವತಿಯಿಂದ ಸೂರಿಂಜೆ ಕೋಟ್ಯಾರು ಜಂಕ್ಷನ್ ನಲ್ಲಿ ಮುಚ್ಚಾಡಿ ರಸ್ತೆಯ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಲಕ್ಷ ಲಸಿಕೆ ಅಭಿಯಾನದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಪ್ರಧಾನಿಯವರ ಭಾವಚಿತ್ರವಿರುವ ಇನ್ನೆರಡು ಬ್ಯಾನರ್‌ಗಳನ್ನು ಸೂರಿಂಜೆ ಸೊಸೈಟಿ ಬಳಿ ಹಾಗೂ ಮತ್ತೊಂದು ಸೂರಿಂಜೆ ಕೋಟೆಯ ಬಳಿ ಅಳವಡಿಸಲಾಗಿದೆ. ಅಭಿವೃದ್ಧಿ ಬಗ್ಗೆ ಮಾಹಿತಿ ಹಾಕಲಾಗಿದ್ದು, ಹರಿದು ಹಾಕುವ ವಿಕೃತ ಮನಸ್ಸಿನ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು ಎಂದು ಬಿಜೆಪಿ ದೂರಿನಲ್ಲಿ ಮನವಿ ಮಾಡಿದೆ.
Kshetra Samachara
12/10/2021 06:03 pm