ವರದಿ: ರಹೀಂ ಉಜಿರೆ
ಕಾರ್ಕಳ: ಜಿಲ್ಲೆಯ ಪ್ರಮುಖ ನಗರ ಮತ್ತು ಪಟ್ಟಣದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ,ಜನರು ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಒಂದೆಡೆ ಅಕ್ಟೋಬರ್ ತಿಂಗಳಾದರೂ ಮಳೆ ನಿಲ್ಲುತ್ತಿಲ್ಲ: ಇನ್ನೊಂದೆಡೆ ಕೆಸರು ನೀರಲ್ಲಿ ರಸ್ತೆ ಹುಡುಕಬೇಕಾದ ಪರಿಸ್ಥಿತಿ ಉಡುಪಿ, ಕಾರ್ಕಳ ಮತ್ತು ಕುಂದಾಪುರದಲ್ಲಿ ನಿರ್ಮಾಣಗೊಂಡಿದೆ.
ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯ ಶಾಸಕರೇ ಇದ್ದಾರೆ.ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಪವರ್ ಫುಲ್ ಖಾತೆ ಹೊಂದಿದ್ದಾರೆ.ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಗೆ ಕೇಂದ್ರ ಸರಕಾರದ ಸಚಿವೆಯಾಗಿ ಭಡ್ತಿ ಸಿಕ್ಕಿದೆ. ಹೀಗಿದ್ದರೂ ಮಾತು ಮಾತಿಗೆ ಅಭಿವೃದ್ಧಿ ಎಂದು ಹೇಳುವ ಜನಪ್ರತಿನಿಧಿಗಳು ರಸ್ತೆ ಅವ್ಯವಸ್ಥೆ ಬಗ್ಗೆ ಮಾತ್ರ ಕಿಂಚಿತ್ತೂ ಗಮನ ಕೊಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳದ ಮೂರು ಮಾರ್ಗದ ರಸ್ತೆ ಸಂಪೂರ್ಣ ರಸ್ತೆ ಹದಗೆಟ್ಟಿದ್ದು, ಇದರಿಂದ ಕೋಪಗೊಂಡ ರಿಕ್ಷಾ ಚಾಲಕರೊಬ್ಬರು ರಸ್ತೆ ಗುಂಡಿಯಲ್ಲಿ ಬಾಳೆ ಗಿಡ ನೆಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಒಳಚರಂಡಿ ಕಾಮಗಾರಿಯ ಸಂದರ್ಭ ಡಾಮಾರು ರಸ್ತೆ ಹಾನಿಯಾಗಿತ್ತು. ಅನಂತರ ಸರಿಯಾದ ದುರಸ್ತಿ ಕಾರ್ಯ ನಡೆಯದೇ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಪುರಸಭೆಯಾಗಲಿ, ಸ್ಥಳೀಯ ಸಚಿವರಾದ ಸುನಿಲ್ ಕುಮಾರ್ ಕೂಡ ಗಮನ ಕೊಡುತಿಲ್ಲ ಅಂತ ಸಾರ್ವಜನಿಕರು ತಮ್ಮಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾತು ಮಾತಿಗೂ ಸ್ವಚ್ಛ ಕಾರ್ಕಳ ಎಂದು ಹೇಳುವ ಸಚಿವ ಸುನಿಲ್ , ಸಚಿವರಾದ ಬಳಿಕ ಈಗ ಮೌನಕ್ಕೆ ಶರಣಾಗಿದ್ದಾರೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೆ ಉಡುಪಿಯ ಪರ್ಕಳ ರಸ್ತೆ ಅವ್ಯವಸ್ಥೆ ಕುರಿತು ಯಕ್ಷಗಾನ ಶೈಲಿಯ ವ್ಯಂಗ್ಯದ ಹಾಡೊಂದು ಬಂದಿತ್ತು.ಹಲವು ಕಡೆ ರಸ್ತೆಯಲ್ಲೇ ಜನ ಗಿಡ ನೆಟ್ಟು ಪ್ರತಿಭಟನೆ ನಡೆಸಿದ್ದುಂಟು.ಆದರೂ ಜನಪ್ರತಿನಿಧಿಗಳಿಗೆ ಬುದ್ಧಿ ಬಾರದೇ ಇರುವುದು ವಿಪರ್ಯಾಸವೇ ಸರಿ.
Kshetra Samachara
06/10/2021 05:40 pm