ಕಾಪು : ಕಾಪು ಶಿರ್ವ ರಸ್ತೆಯಲ್ಲಿ ಮಲ್ಲಾರು ಬ್ರಿಡ್ಜ್ ಬಳಿ ಬೃಹತ್ ಗಾತ್ರದ ಹೊಂಡಗಳು ಬಿದ್ದು ವಾಹನ ಸವಾರರಿಗೆ ಅಡ್ಡಿ ಉಂಟಾಗಿದೆ . ಮಳೆ ಬಂದರಂತೂ ಮಳೆ ನೀರಿಗೆ ಹೊಂಡಗಳು ಗೋಚರಿಸದೆ ಹಲವು ಅಪಘಾತಗಳು ಸಂಭವಿಸಿವೆ .
ಕಾಪು, ಮಜೂರು, ಶಿರ್ವ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿರುವುದರಿಂದ ದಿನ ನಿತ್ಯ ನೂರಾರು ವಾಹನಗಳ ಸವಾರರಿಗೆ ಸಮಸ್ಯೆ ಉಂಟಾಗಿದೆ.ಕೆಲವು ದಿನಗಳ ಹಿಂದೆ ಗುಂಡಿ ಮುಚ್ಚಿದರೂ ಎರಡೇ ದಿನಗಳಲ್ಲಿ ಮಳೆ ನೀರಿಗೆ ಕೊಚ್ಚಿ ಹೋಗಿ ಹೊಂಡಗಳಾಗಿ ಮಾರ್ಪಟ್ಟಿವೆ. ದಿನನಿತ್ಯ ಅಧಿಕಾರಿಗಳು, ಜನಪ್ರತಿನಿದಿಗಳು ಇದೇ ರಸ್ತೆಯಲ್ಲಿ ಸಾಗಿದರೂ ಈ ರಸ್ತೆಯ ಸಮಸ್ಯೆ ಅವರ ಗಮನಕ್ಕೆ ಬಾರದಿರುವುದು ನಿತ್ಯ ಸಂಚಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಈ ರಸ್ತೆ ಸಮಸ್ಯೆಗೆ ಸಂಬಂಧ ಪಟ್ಟ ಇಲಾಖೆಗಳು ಶೀಘ್ರ ಪರಿಹಾರ ಮಾಡುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.
Kshetra Samachara
03/10/2021 12:38 pm