ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಸ್ತ್ರಸಂಹಿತೆ: ಪೊಳಲಿ ದೇವಸ್ಥಾನದಲ್ಲಿ ವಿಹಿಂಪ, ಬಜರಂಗದಳದಿಂದ ಬೋರ್ಡ್

ಬಂಟ್ವಾಳ: ಹಿಂದು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ದೇವಸ್ಥಾನವನ್ನು ಪ್ರವೇಶಿಸಬೇಕಾಗಿ ವಿನಂತಿ.. ಈ ಸಂದೇಶವಿರುವ ಬೋರ್ಡ್ ಅನ್ನು ವಿಶ್ವಹಿಂದು ಪರಿಷತ್ತು, ಬಜರಂಗದಳದ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಅಳವಡಿಸಲಾಗಿದೆ.

ಇತಿಹಾಸ ಪ್ರಸಿದ್ಧ ಸಾವಿರ ಸೀಮೆಯ ಒಡತಿ ಕಾರಣಿಕ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕೆಂದು ವಿಶ್ವ ಹಿಂದು ಪರಿಷದ್ ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಕಳೆದ ಏಪ್ರಿಲ್ ತಿಂಗಳಿನಲ್ಲಿ 3000 ಜನ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದ್ದರು. ಅದರಂತೆ ಆದಷ್ಟು ಬೇಗ ವಸ್ತ್ರಸಂಹಿತೆ ನೀತಿ ಜಾರಿಯಾಗಬೇಕೆಂದು ಬಂಟ್ವಾಳ ಪ್ರಖಂಡದ ವತಿಯಿಂದ ದೇವಾಸ್ಥಾನದಲ್ಲಿ ಶುಕ್ರವಾರ ವಸ್ತ್ರಸಂಹಿತೆ ಬೋರ್ಡ್ ಅಳವಡಿಸಲಾಯಿತು. ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೆಲ್, ಜಿಲ್ಲಾ ಸಹ ಸಂಚಾಲಕ್ ಗುರುರಾಜ್ ಬಂಟ್ವಾಳ್, ವಿ.ಹಿಂ.ಪ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು, ಬಜರಂಗದಳ ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಸಂತೋಷ್ ಕೆ ಸರಪಾಡಿ, ದೀಪಕ್ ಬಂಟ್ವಾಳ್, ಪ್ರಸಾದ್ ಬೆಂಜನಪದವು, ರತೀಶ್ ರಾಮಲ್ ಕಟ್ಟೆ, ಪ್ರವೀಣ್ ಕುಂಟಾಲಪಲ್ಕೆ, ಅಶ್ವತ್ ಪೂಂಜಾಲ್ ಕಟ್ಟೆ, ಪೋಳಲಿ ಖಂಡ ಸಮಿತಿ ಹಾಗೂ ಘಟಕದ ಪ್ರಮುಖರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

01/10/2021 05:09 pm

Cinque Terre

11.11 K

Cinque Terre

1

ಸಂಬಂಧಿತ ಸುದ್ದಿ