ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕ್ಷೀರಸಾಗರ ಸೊಸೈಟಿ ಹಿಂಭಾಗದಲ್ಲಿ ಹಾದುಹೋಗುವ ರಸ್ತೆ ಕೆಟ್ಟು ಕೆರ ಹಿಡಿದಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ರಸ್ತೆಯ ಪಕ್ಕದಲ್ಲಿ ಬಹು ಮಹಡಿ ಕಟ್ಟಡ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಯುತ್ತಿದ್ದು ರಸ್ತೆ ಪೂರ ಹಾಳಾಗಿದೆ. ಎಗ್ಗಿಲ್ಲದೆ ಭಾರವಾದ ವಸ್ತುಗಳನ್ನು ಹೊತ್ತ ಲಾರಿ ಸಹಿತ ಇನ್ನಿತರ ವಾಹನಗಳು ಚಲಿಸಿ ರಸ್ತೆ ಅಸ್ಥಿಪಂಜರದಂತೆ ಗೋಚರಿಸುತ್ತಿದೆ.
ಕ್ಷೀರಸಾಗರದ ಹಿಂಬದಿಯಲ್ಲಿ ಸುಮಾರು 20 ಮನೆಗಳಿದ್ದು ಇದೇ ರಸ್ತೆಯನ್ನು ಆಶ್ರಯಿಸಬೇಕಾಗಿದೆ.
ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ ಕ್ಷೀರಸಾಗರ ದಿಂದ ಕವಲೊಡೆಯುವ ಈ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಕಂಬ ಅಪಾಯದ ಸ್ಥಿತಿಯಲ್ಲಿದ್ದು ಈಗಲೋ ಆಗಲೋ ಎನ್ನುವಂತಿದೆ.
ರಸ್ತೆ ಅವ್ಯವಸ್ಥೆ ಬಗ್ಗೆ ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆಯಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯ ಯೋಗೀಶ್ ಕೋಟ್ಯಾನ್ ಪ್ರಸ್ತಾಪಿಸಿ ಬಹು ಮಹಡಿ ಕಟ್ಟಡಕ್ಕೆ ಪರವಾನಿಗೆ ನೀಡುವ ಮೊದಲು ಕಟ್ಟಡದ ಕಾಮಗಾರಿ ನಡೆಸುವ ವರಿಂದ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದ್ದರು.
ಕೂಡಲೇ ನಗರಪಂಚಾಯತ್ ಹಾಗೂ ಮೆಸ್ಕಾಂ ಇಲಾಖೆ ರಸ್ತೆ ಅವ್ಯವಸ್ಥೆ ಹಾಗೂ ಟ್ರಾನ್ಸ್ಫಾರ್ಮರ್, ವಿದ್ಯುತ್ ಕಂಬವನ್ನು ದುರಸ್ತಿ ಪಡಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ
Kshetra Samachara
30/09/2021 09:39 pm