ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಕಾಲೋನಿ ತೋಕೂರು ಸಂಪರ್ಕರಸ್ತೆ ಇಕ್ಕೆಲಗಳಲ್ಲಿ ಬೆಳೆದ ಹುಲ್ಲಿನಿಂದ ಸಂಚಾರ ತ್ರಾಸದಾಯಕ ವಾಗಿ ಪರಿಣಮಿಸಿದೆ.
ಬೆಳ್ಳಾರಿ ಪರಿಶಿಷ್ಟ ಪಂಗಡದ ಕಾಲನಿಯಲ್ಲಿ ಅನೇಕ ಕುಟುಂಬಗಳು ವಾಸವಾಗಿದ್ದು ಕಾಂಕ್ರೀಟ್ ರಸ್ತೆ ಹುಲ್ಲಿನಿಂದ ಆವೃತವಾಗಿ ಚರಂಡಿ ಮುಚ್ಚಿಹೋಗಿದ್ದು ಕೃತಕ ನೆರೆಯಿಂದ ಕಾಂಕ್ರೀಟ್ ರಸ್ತೆಯಲ್ಲಿ ಮಣ್ಣು ಹರಡಿದೆ.
ಅದರಂತೆ ತೋಕೂರು ನಿಂದ ಜಳಕದ ಕೆರೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದ್ದು ರಸ್ತೆ ನಾಶದ ಭೀತಿ ಎದುರಾಗಿದೆ.
ಈ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಬಗ್ಗೆ ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ವಿನೋದ್ ಸಾಲ್ಯಾನ್ ಮಾತನಾಡಿ ಅವ್ಯವಸ್ಥೆ ಬಗ್ಗೆ ಗಮನಕ್ಕೆ ಬಂದಿದ್ದು ರಸ್ತೆಬದಿಯ ಗಿಡಗಂಟಿ ಹುಲ್ಲುಗಳನ್ನು ಕೂಡಲೇ ತೆರವುಗೊಳಿಸಲಾಗುವುದು ಹಾಗೂ ಮೆಸ್ಕಾಂ ವಿದ್ಯುತ್ ಕಂಬದಲ್ಲಿ ಸುತ್ತಿಕೊಂಡಿರುವ ಬಳ್ಳಿಗಳನ್ನು ತೆರವುಗೊಳಿಸ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
Kshetra Samachara
24/09/2021 09:01 pm