ಉಡುಪಿ : ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯ ವಾಣಿಜ್ಯ ಸಂಕೀರ್ಣದ ಪಕ್ಕದ ರಸ್ತೆಯಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್, ಕೋಳಿ ತ್ಯಾಜ್ಯ, ಹಸಿ ಮತ್ತು ಒಣ ತ್ಯಾಜ್ಯ, ಸತ್ತ ಪ್ರಾಣಿಗಳ ಕಳೇಬರಗಳನ್ನು ಎಸೆಯುತ್ತಿದ್ದರು.ಪರಿಣಾಮವಾಗಿ ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿತ್ತು. ರೋಗವಾಹಕ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿತ್ತು. ಈ ಬಗ್ಗೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಪರಿಸರ ಸ್ವಚ್ಛತೆ ಕಾಪಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಧ್ಯಮಗಳ ಮೂಲಕ ಆಗ್ರಹಿಸಿಸಿದ್ದರು.
ಪಬ್ಲಿಕ್ ನೆಕ್ಸ್ಟ್ ಈ ಕುರಿತು ಸುದ್ದಿ ಬಿತ್ತರಿಸಿತ್ತು.ಸುದ್ದಿ ಬಿತ್ತರಗೊಂಡ ಎರಡೇ ದಿನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ತಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಗುರುತಿಸಿ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.ಈ ಕಾರ್ಯಚರಣೆಯಲ್ಲಿ ನಗರಸಭೆ ಆರೋಗ್ಯ ಅಧಿಕಾರಿ ಕರುಣಾಕರ್, ನಗರಸಭೆ ಸಿಬ್ಬಂದಿ ಯೋಗೇಶ್ ಪ್ರಭು, ಹಾಗೂ ವಾರ್ಡಿನ ಸ್ವಚ್ಚತಾ ಉಸ್ತುವಾರಿ ಭಾಗಿಯಾಗಿದ್ದರು. ನಗರಸಭೆಯ ಕಾರ್ಯಾಚರಣೆಗೆ ನಾಗರಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
21/09/2021 01:28 pm