ಬಜಪೆ : ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಸಂಪರ್ಕಿಸುವ ಪ್ರಮುಖ ಮೂಲರಪಟ್ಣ ಸೇತುವೆಯು 2018 ರ ಜೂನ್ 26 ರಂದು ಏಕಾಏಕಿ ಮುರಿದು ಬಿದ್ದಿತ್ತು.ಇದರಿಂದಾಗಿ ಈ ಭಾಗದಲ್ಲಿನ ವಾಹನಗಳ ಸಂಚಾರಕ್ಕೆ ಸಂಪರ್ಕನೇ ಇಲ್ಲದಂತಾಗಿತ್ತು.ಅನತಿ ದೂರದಲ್ಲಿನ ತೂಗು ಸೇತುವೆಯ ಮೂಲಕನೇ ಜನರು ಕೇವಲ ನಡೆದುಕೊಂಡು ಬರಲು ಮಾತ್ರ ಸಾಧ್ಯವಾಗಿದ್ದು,ಸರಕು ಸಾಗಾಟಕ್ಕೆ ಸುತ್ತು ಬಳಸಿ ಬರಬೇಕಾದ ಪರಿಸ್ಥಿತಿ ಉಂಟಾಗಿತ್ತು.ಇದೀಗ ನೂತನ ಸೇತುವೆಯ ನಿರ್ಮಾಣ ಕಾಮಗಾರಿಯು ಬರದಿಂದ ಸಾಗುತ್ತಿದ್ದು, ನಡೆಯುತ್ತಿದ್ದು,ಇನ್ನೆರಡು ತಿಂಗಲುಗಳಲ್ಲಿಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಈ ಹಿಂದೆ ಗುರುಪುರ ಸೇತುವೆಯನ್ನು ನಿರ್ಮಿಸಿದ್ದ ಕಾವೂರಿನ ಮೊಗರೋಡಿ ಕನ್‍ಸ್ಟ್ರಕ್ಷನ್ ಸಂಸ್ಥೆಯೇ ಮೂಲರಪಟ್ಣ ಸೇತುವೆಯನ್ನೂ ನಿರ್ಮಿಸುತ್ತಿದೆ. ಸೇತುವೆ ನಿರ್ಮಾಣ ಕಾಮಗಾರಿ ಮಳೆ ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ.ಸರಕಾರದಿಂದ ಹಣಕಾಸು ಮಂಜೂರಾತಿಗಾಗಿ ಶಾಸಕರುಗಳಾದ ರಾಜೇಶ್ ನಾಯ್ಕ್ ಹಾಗೂ ಡಾ.ಭರತ್ ಶೆಟ್ಟಿ ಅವರು ಶ್ರಮಿಸಿದ್ದರು.
14.69 ಕೋಟಿ ರೂಪಾಯಿ ವೆಚ್ಚದ ಈ ಸೇತುವೆಯ ಕಾಮಗಾರಿ 2018-19ರಲ್ಲಿ ಆರಂಭಗೊಂಡಿದೆ. ಇದು ಲೋಕೋಪಯೋಗಿ ಇಲಾಖೆಯ(ಪಿಡಬ್ಲ್ಯೂಡಿ) ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಸೇತುವೆಯಾಗಿದ್ದು, ಮಂಗಳೂರು-ಗಂಜಿಮಠ-ಮೂಡಬಿದ್ರೆ-ಎಡಪದವು-ಕುಪ್ಪೆಪದವು ಭಾಗದಿಂದ ಬಿ ಸಿ ರೋಡಿಗೆ ನೇರ ಸಂಪರ್ಕಕೊಂಡಿಯಾಗಿದೆ.
Kshetra Samachara
19/09/2021 07:26 pm