ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಪು -ಇಂದ್ರ ನಗರ ಸಂಪರ್ಕ ರಸ್ತೆ. ಹೊಂಡ ಗುಂಡಿಯಿಂದ ಕೆಸರುಮಯವಾಗಿದ್ದು ಸಂಚಾರ ದುಸ್ತರವಾಗಿದೆ.
ಪಡುಪಣಂಬೂರು ತೋಕೂರು ಪ್ರಧಾನ ರಸ್ತೆಯ ಕಲ್ಲಾಪು ಸೇತುವೆಯಿಂದ ಕವಲೊಡೆದು ಹಳೆಯಂಗಡಿ ಇಂದ್ರನಗರ ರಸ್ತೆಗೆ ಸಂಪರ್ಕ ಕಲ್ಪಿಸುವ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯ ರಸ್ತೆ ಅರ್ಧಂಬರ್ಧ ಕಾಮಗಾರಿಯಿಂದ ಬಾರೀ ಮಳೆಗೆ ಕೆಸರುಮಯವಾಗಿದ್ದು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ.
ಈ ರಸ್ತೆಯ ಕೆಲವು ಕಡೆಗಳಲ್ಲಿ ಪರಿಸ್ಥಿತಿ ಎಷ್ಟು ಅಧೋಗತಿಗೆ ಇಳಿದಿದೆ ಎಂದರೆ ಕೆಸರುಮಯ ರಸ್ತೆಯಲ್ಲಿ ನಡೆಯಲು ಅಸಾಧ್ಯವಾಗಿ ರಸ್ತೆಬದಿಯಲ್ಲಿ ಸೈಟ್ ಗಳಿಗೆ ನಿರ್ಮಿಸಿರುವ ಆವರಣ ಗೋಡೆಯ ಮೇಲೆ ತ್ರಾಸದಾಯಕವಾಗಿ ಹತ್ತಿ ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.
ಕಳೆದ ಕೆಲವು ಕೆಲವು ತಿಂಗಳ ಹಿಂದೆ ಪಡುಪಣಂಬೂರು ಕಲ್ಲಾಪು ಸೇತುವೆ ಕುಸಿದಾಗ ಹಳೆಯಂಗಡಿ ತೋಕೂರು ಪರಿಸರದ ನಾಗರಿಕರಿಗೆ ಈ ರಸ್ತೆಯ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಸ್ತೆ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಸ್ಥಳೀಯ ಪಂಚಾಯಿತಿಗೆ ಶಾಸಕರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ್ ಶೆಟ್ಟಿ.
Kshetra Samachara
15/09/2021 06:40 pm