ಮುಲ್ಕಿ:ಮುಲ್ಕಿ ಒಂಬತ್ತು ಮಾಗಣೆಯ ಎಳತ್ತೂರು ಗ್ರಾಮದಲ್ಲಿ ಕಾಲಗರ್ಭದಲ್ಲಿ ಮರೆಮಾಚಿರುವ ಎಳತ್ತೂರು ಕಾಪೇಡಿ ಗುತ್ತು ವಿನಲ್ಲಿ ಕಳೆದುಹೋಗಿರುವ ದೈವಗಳ ಅವಶೇಷ ಪತ್ತೆಯಾಗಿದೆ. ಶತಮಾನದ ಹಿಂದೆ ಕುಟುಂಬವು ಹಲವಾರು ವಿಭಾಗಗಳಾಗಿ, ತದನಂತರ ಒಬ್ಬರಿಗೊಬ್ಬರಿಗೆ ಪರಿಚಯವಾಗಿ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆಯನ್ನು ಇಡಲಾಗಿತ್ತು..ಅದರಲ್ಲಿ ಗೋಚರವಾದಂತೆ ಪ್ರಧಾನವಾಗಿ ಉಳ್ಳಾಯ, ಕಾಂತೇರಿ ಜುಮಾದಿ ಹಾಗೂ ಪರಿವಾರ ದೈವಗಳು ಇರುವುದು ಕಂಡುಬದಿತ್ತು..ಅಲ್ಲದೆ ಇಂದು ಕಾಂತೇರಿ ಜುಮಾದಿ ದೈವಕ್ಕೆ ಮೈಲೆಡ್ ಮಾನೆಚ್ಚಿಲ್ ಸೇವೆಯನ್ನು ನೀಡಲಾಗಿತ್ತು.
ದೈವದ ನುಡಿ ಬಂದಂತೆ ಪುರಾತನದ ಗುತ್ತಿನ ಮನೆ ಇದ್ದ ಸ್ಥಳದಲ್ಲಿ ದೈವಕ್ಕೆ ಸಂಬಂದಿಸಿದ ಸೊತ್ತುಗಳು ಸಿಗುವುದೆಂದು ನುಡಿಯಾಗಿತ್ತು.
ಅಂತೆಯೇ ಹುಡುಕಲು ಪ್ರಾರಂಭಿಸಿದ ದೈವಗಳ ಅವಶೇಷ ಇರುವುದು ಪತ್ತೆಯಾಗಿದೆ. ಎಳತ್ತೂರು ಕಾಪೇಡಿ ಗುತ್ತು ಕಾಂತೇರಿ ಜುಮಾದಿ ದೈವವು ತನ್ನ ಕಾರ್ಣಿಕವನ್ನು ತೋರಿಸಿ ಕುಟುಂಬದವರನ್ನು ಮತ್ತು ಇಡೀ ತುಳುನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದು ದೈವಗಳ ಮೇಲಿನ ಜನರ ಭಕ್ತಿ ನಂಬಿಕೆ ಜೀವಂತವಾಗಿರಿಸಿದೆ.
ಅಂತೆಯೇ ದೈವದ ಪ್ರೇರಣೆಯಂತೆ, ಕುಟುಂಬಸ್ಥರ ಸಂಕಲ್ಪದಂತೆ ಸೆ. 11 ಕ್ಕೆ ಕಾಪೇಡಿ ಗುತ್ತು ಧರ್ಮ ಚಾವಡಿಯ ನೂತನ ಮನೆಗೆ ಶಿಲಾನ್ಯಾಸ ಮಾಡುವುದಾಗಿ ನಿಶ್ಚಯಿಸಲಾಗಿದೆ.
Kshetra Samachara
09/09/2021 04:13 pm