ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಐಕಳ ಭರ್ಜರಿ ಕೋಳಿ ಅಂಕ ನಿಲ್ಲಿಸಲು ಸ್ಥಳೀಯರ ಆಗ್ರಹ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಐಕಳ ನಾಗನಕಲ್ಲು ಬಳಿ ಬುಧವಾರ ಬೆಳಗ್ಗಿನಿಂದ ಭರ್ಜರಿ ಕೋಳಿಅಂಕ ಅಕ್ರಮವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ ಕೋಳಿ ಅಂಕಕ್ಕೆ ನಾವು ಪರವಾನಿಗೆ ನೀಡಿಲ್ಲ ಎಂದು ಹೇಳುತ್ತಾರೆ.ಕೊರೊನಾ ದಿನಗಳಲ್ಲಿ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಕಿನ್ನಿಗೋಳಿ, ಏಳಿಂಜೆ ಸಂಕಲಕರಿಯ, ಹಳೆಯಂಗಡಿ ಕೊಳುವೈಲು ಪ್ರದೇಶ ಗಳಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಎಗ್ಗಿಲ್ಲದೆ ಕೋಳಿ ಅಂಕ ನಡೆಯುತ್ತಿದ್ದು ಕೊರೋನಾ ಸಾಮಾಜಿಕ ಅಂತರ ಪಾಲಿಸದೆ ಜನರು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಜೂಜಾಟ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರಕಾರವು ಮದುವೆ, ದೇವಸ್ಥಾನ ಸಹಿತ ಇನ್ನಿತರ ಸಮಾರಂಭಗಳಲ್ಲಿ ಜನ ಸೇರಲು ಕೊರೋನಾ ಕಾರಣದಿಂದ ನಿರ್ಬಂಧ ಹೇರುತ್ತಿದ್ದು ಕೋಳಿಅಂಕ ಸಹಿತ ಜೂಜಾಟಕ್ಕೆ ಪೊಲೀಸರು ಪರವಾನಿಗೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಅಕ್ರಮ ಕೋಳಿ ಅಂಕವನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

08/09/2021 02:38 pm

Cinque Terre

4.6 K

Cinque Terre

1