ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಎಸ್ ಕೋಡಿ ಜಂಕ್ಷನ್ ಬಳಿ ಬಹು ಗ್ರಾಮದ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದು ಕೃತಕ ಕೆರೆ ನಿರ್ಮಾಣವಾಗಿತ್ತು.ಕಳೆದ ಕೆಲವು ದಿನಗಳಿಂದ ರಾಜ್ಯ ಹೆದ್ದಾರಿಯ ಮಧ್ಯಭಾಗದಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು ಹೆದ್ದಾರಿಯಲ್ಲಿ ಹೊಂಡ ಉಂಟಾಗಿ ಕಾರಂಜಿಯಂತೆ ನೀರು ಚಿಮ್ಮುತ್ತಿದ್ದು ಅತಿವೇಗದಿಂದ ಹೆದ್ದಾರಿಯಲ್ಲಿ ಬರುವ ವಾಹನಗಳ ಚಾಲಕರು ಅರಿವಿಲ್ಲದೆ ಹೊಂಡಕ್ಕೆ ಬಿದ್ದು ಅಪಘಾತಗಳು ಸಂಭವಿಸಿತ್ತು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ತುಂಡಾಗಿ ನೀರು ಪೋಲಾಗುತ್ತಿರುವ ಬಗ್ಗೆ ಹಾಗೂ ತೆರೆದ ಹೊಂಡದಿಂದ ಅಪಾಯದ ಬಗ್ಗೆ "ಪಬ್ಲಿಕ್ ನೆಕ್ಸ್ಟ್"ಹಾಗೂ ಸ್ಥಳೀಯ ರಿಕ್ಷಾ ಚಾಲಕರು, ಪಂಚಾಯತ್ ಪ್ರತಿನಿಧಿಗಳು ದೂರಿನ ಅನ್ವಯ ಎಚ್ಚೆತ್ತ ಅಧಿಕಾರಿಗಳು ಭಾನುವಾರ ಸರಿಪಡಿಸಲು ಮುಂದಾಗಿದ್ದು ಜೆಸಿಬಿ ಮೂಲಕ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ.
Kshetra Samachara
05/09/2021 05:08 pm