ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ ಇ.ಡಿ. ನೂತನ ಕಚೇರಿ ಕಾರ್ಯಾರಂಭ

ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಕೇಂದ್ರ ಅಬಕಾರಿ ಸಿಬ್ಬಂದಿ ಕ್ವಾರ್ಟರ್ಸ್‌ನಲ್ಲಿ ಭಾರತ ಸರಕಾರದ ಕಂದಾಯ ಇಲಾಖೆಯ ಜಾರಿ ನಿರ್ದೇಶನಾಲಯದ (ಇ.ಡಿ.) ಉಪ ವಲಯ ಕಚೇರಿಯ ನೂತನ ಕಚೇರಿಯು ಆರಂಭಗೊಂಡಿದೆ.

ಕಂದಾಯ ಇಲಾಖೆಯ ಜಾರಿ ನಿರ್ದೇಶನಾಲಯದ (ಇ.ಡಿ.)ಯ ಈ ನೂತನ ಉಪ ವಲಯ ಕಚೇರಿಯು ಬೆಂಗಳೂರು ವಲಯ ಕಚೇರಿಯ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಅದೇ ರೀತಿ ಉಪ ನಿರ್ದೇಶಕರ ನೇತೃತ್ವದಲ್ಲಿ ಕಾರ್ಯಾಚರಿಸಲಿದೆ.

ಇದು ಕರ್ನಾಟಕದ 15 ಜಿಲ್ಲೆಗಳಾದ ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಗದಗ, ಹಾವೇರಿ, ದಾವಣಗೆರೆ, ಧಾರವಾಡ, ಕಲಬುರಗಿ, ಉತ್ತರ ಕನ್ನಡ, ಕೊಪ್ಪಳ, ಉಡುಪಿ ಮತ್ತು ರಾಯಚೂರು ವ್ಯಾಪ್ತಿಯನ್ನು ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

04/09/2021 01:39 pm

Cinque Terre

8.65 K

Cinque Terre

0

ಸಂಬಂಧಿತ ಸುದ್ದಿ