ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊಲ್ನಾಡು ಉರಿಯದ ಹೈಮಾಸ್ಟ್ ದೀಪ, ಕಗ್ಗತ್ತಲೆ

ಮುಲ್ಕಿ: ಮುಲ್ಕಿ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ಜಂಕ್ಷನ್ ಬಳಿ ಕಳೆದ ವರ್ಷಗಳ ಹಿಂದೆ ಅಳವಡಿಸಿದ್ದ ಹೈಮಾಸ್ಟ್ ದಾರಿದೀಪ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು ಕಗ್ಗತ್ತಲೆಯಿಂದ ಪ್ರಯಾಣ ದುಸ್ತರವಾಗಿದೆ.

ಮುಲ್ಕಿ ನ.ಪಂ.ನ ಕಾರ್ನಾಡು ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ದಿನವೊಂದಕ್ಕೆ ಸಾವಿರಾರು ಪ್ರಯಾಣಿಕರು, ಕೈಗಾರಿಕಾ ಸಂಸ್ಥೆಯ ನೌಕರರು, ನಡೆದಾಡುವ ಕೊಲ್ನಾಡು ಬಸ್ಸು ನಿಲ್ದಾಣದಲ್ಲಿ ಅಳವಡಿಸಿರುವ ಹೈಮಾಸ್ಟ್ ದಾರಿದೀಪ ಕೆಟ್ಟುಹೋಗಿದೆ.

ಕೊಲ್ನಾಡು ಜಂಕ್ಷನ್ ಬಳಿ ರಿಕ್ಷಾ ನಿಲ್ದಾಣ, ಪೆಟ್ರೋಲ್ ಬಂಕ್, ಬ್ಯಾಂಕ್ ಉದ್ಯಮ ಸಹಿತ ಜನನಿಬಿಡ ಪ್ರದೇಶವಾಗಿದ್ದು ಹೈಮಾಸ್ಟ್ ದಾರಿದೀಪದ ಅವ್ಯವಸ್ಥೆಯಿಂದ ಸ್ಥಳೀಯ ನಾಗರಿಕರಿಗೆ ತೀವ್ರ ತೊಂದರೆಯಾಗಿದೆ.

ಈ ಬಗ್ಗೆ ಅನೇಕ ಬಾರಿ ನಗರ ಪಂಚಾಯಿತಿಗೆ ದೂರು ನೀಡಿದ್ದರೂ ಇದುವರೆಗೆ ದುರಸ್ತಿಯಾಗಿಲ್ಲ ಎಂದು ಸ್ಥಳೀಯ ರಿಕ್ಷಾ ಚಾಲಕರು ತಿಳಿಸಿದ್ದಾರೆ.

ಕೂಡಲೇ ಸಂಬಂಧಪಟ್ಟ ಆಡಳಿತ ಹೈಮಾಸ್ಟ್ ದಾರಿದೀಪ ದುರಸ್ತಿಪಡಿಸಿ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಟೋ ಚಾಲಕ ಉಮೇಶ್ ಕೊಲ್ನಾಡು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/09/2021 07:37 pm

Cinque Terre

10.82 K

Cinque Terre

0

ಸಂಬಂಧಿತ ಸುದ್ದಿ