ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಗಾಂಧಿ ಮೈದಾನ ಬಳಿ ರಾಜ್ಯ ಹೆದ್ದಾರಿ ಬದಿಯ ಚರಂಡಿಯಲ್ಲಿ ತ್ಯಾಜ್ಯ ನೀರು ತುಂಬಿತುಳುಕುತ್ತಿದ್ದು ವಾತಾವರಣ ಕಲುಷಿತವಾಗುತ್ತಿದೆ.
ತ್ಯಾಜ್ಯ ನೀರಿನಲ್ಲಿ ಕಸಕಡ್ಡಿಗಳು ನೀರಿನ ಬಾಟಲಿಗಳು ತೆರೆದ ಸ್ಥಿತಿಯಲ್ಲಿ ತೇಲುತ್ತಿದ್ದು ಕೊರೊನಾ ಜೊತೆಗೆ ಮಲೇರಿಯಾ ಡೆಂಗ್ಯೂ ಮಾರಕ ರೋಗಗಳ ಭೀತಿ ಎದುರಾಗಿದೆ
ಮುಲ್ಕಿ ಜೂನಿಯರ್ ಕಾಲೇಜಿಗೆ , ನಗರ ಪಂಚಾಯಿತಿಗೆ, ಸ್ಥಳೀಯ ಚರ್ಚ್ ಗೆ ಅನೇಕ ನಾಗರಿಕರು ಇದೇ ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿದ್ದು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.
ಸ್ವಚ್ಛತೆ ಬಗ್ಗೆ ತಿಳಿಹೇಳುವ ಮುಲ್ಕಿ ನಗರ ಪಂಚಾಯತ್ ಎದುರುಗಡೆ ತೆರೆದ ಸ್ಥಿತಿಯಲ್ಲಿ ಚರಂಡಿಯಿಂದ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ಸ್ಥಳೀಯರು ತ್ಯಾಜ್ಯ ನೀರು ತೆರೆದ ಸ್ಥಿತಿಯಲ್ಲಿ ಚರಂಡಿಗೆ ಬಿಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿದ್ದು ಕೂಡಲೇ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
26/08/2021 07:09 pm