ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಕಾಂಕ್ರೀಟ್ ರಸ್ತೆ ಬೇಡಿಕೆಗಿಲ್ಲ ಮನ್ನಣೆ ಮಣ್ಣಿನ ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು, ಸಾಂಕ್ರಾಮಿಕ ರೋಗದ ಭೀತಿ

ಕಾಪು : ಕಾಪು ಪುರಸಭಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ 6ನೇ ವಾರ್ಡ್ ಕಲ್ಯ ಪರಿಸರದಲ್ಲಿನ ಮನೆಗಳಿಗೆ ಸಮರ್ಪಕ ರಸ್ತೆ ಮತ್ತು ಚರಂಡಿಯ ವ್ಯವಸ್ಥೆಗಳಿಲ್ಲದೇ ನಿವಾಸಿಗಳು ಪರದಾಡುವಂತಾಗಿದೆ. ಈ ರಸ್ತೆಯನ್ನೇ ಅವಲಂಭಿಸಿ ವಾರ್ಡ್ ಕೆಳಗಿನ 50ಕ್ಕೂ ಅದಿಕ ಮನೆಗಳ ನಿವಾಸಿಗಳು ಸುತ್ತು ಬಳಸಿ ಸಂಚರಿಸುವಂತಾಗಿದೆ.

ಸ್ಥಳೀಯರು ಪ್ರತೀ ಬಾರಿ ಕಾಪು ಪುರಸಭೆಗೆ ರಸ್ತೆಗಾಗಿ ಮನವಿ ಸಲ್ಲಿಸುತ್ತಿದ್ದರೂ, ರಸ್ತೆ ನಿರ್ಮಾಣ ಯೋಜನೆ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದೆ. ಕೊಳಚೆ ನೀರು ಕೂಡಾ ಇದೇ ರಸ್ತೆಯಲ್ಲಿ ಹರಿದು ಹೋಗುತ್ತಿರುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗದ ಭೀತಿ ಹರಡುವ ಎದುರಾಗಿದೆ.

ಕಾಪು ಪುರಸಭಾ ವ್ಯಾಪ್ತಿಯ ಕಲ್ಯ ವಾರ್ಡ್‌ಗೆ ಸೇರಿಸುವ ಈ ರಸ್ತೆಯು ಸುತ್ತಲಿನ ಕಾಪು - ಕಲ್ಯ ರಸ್ತೆ, ಕಾಪು-ಇನ್ನಂಜೆ, ಕಲ್ಯ-ಭಾರತ್‌ನಗರಕ್ಕೆ ತೆರಳುವ ಜನರಿಗೆ ಹತ್ತಿರದ ವ್ಯವಸ್ಥೆಯಾಗಿದ್ದು, ರಸ್ತೆ ನಿರ್ಮಾಣವಾದಲ್ಲಿ ಇದು ನೂರಾರು ಮಂದಿಯ ಓಡಾಟಕ್ಕೆ ಉಪಯುಕ್ತವಾಗಲಿದೆ. ರಸ್ತೆ ನಿರ್ಮಾಣಕ್ಕಾಗಿ ಖಾಸಗಿಯವರು ಈಗಾಗಲೇ ರಸ್ತೆಯ ಜಾಗವನ್ನು ದಾನ ಪತ್ರದ ಮೂಲಕ ಪುರಸಭೆಗೆ ಲಿಖಿತವಾಗಿ ನೀಡಿದ್ದರೂ, ಪುರಸಭೆ ಮಾತ್ರಾ ರಸ್ತೆ ಮಾಡಲು ಹಲವು ಬಾರಿ ಮನವಿ ಮಾಡಿದರೂ ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿದ್ದಾರೆ.

ಇನ್ನಾದರೂ ಸ್ಥಳೀಯರ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಿ ಕಾಂಗ್ರೇಟ್ ರಸ್ತೆ ನಿರ್ಮಾಣಕ್ಕೆ ಮುಂದಾಗ ಬೇಕಿದ್ದು ಈ ಬಗ್ಗೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

20/08/2021 08:07 pm

Cinque Terre

9.4 K

Cinque Terre

0