ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಹೆದ್ದಾರಿ ಜಂಕ್ಷನ್ ಒಳಚರಂಡಿ ಅವ್ಯವಸ್ಥೆ ಮುಗಿಯದ ಗೋಳು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ66ರ ಹಳೆಯಂಗಡಿ ಜಂಕ್ಷನ್ ಬಳಿ ಒಳಚರಂಡಿ ಅವ್ಯವಸ್ಥೆ ಯಿಂದ ಮಳೆ ನೀರು ನಿಂತು ಕೆಸರುಮಯವಾಗಿದ್ದು , ಮುಗಿಯದ ಗೋಳಾಗಿ ಪರಿಣಮಿಸಿದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.

ಕಳೆದ ಹಲವಾರು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಗೊಳ್ಳುವ ವೇಳೆಯಲ್ಲಿ ಹಳೆಯಂಗಡಿ ಪೇಟೆ ಅಗಲೀಕರಣ ವಾಗಿದ್ದು ಸೂಕ್ತ ಸರ್ವಿಸ್ ರಸ್ತೆ, ಹಾಗೂ ಒಳಚರಂಡಿ ವ್ಯವಸ್ಥೆಯ ವಂಚಿತವಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿ ನೀರು ನಿಲ್ಲುತ್ತಿದ್ದು ಕೆಸರುಮಯ ಪ್ರದೇಶವಾಗಿದೆ.

ಹಳೆಯಂಗಡಿ ಜಂಕ್ಷನ್ ಜನನಿಬಿಡ ಪ್ರದೇಶವಾಗಿದ್ದು ಕಿನ್ನಿಗೋಳಿ,-ಕಟೀಲು, ಮೂಡಬಿದ್ರೆ ಹಾಗೂ ಮಂಗಳೂರು,ಮುಲ್ಕಿ ಕಡೆಗೆ ಹೋಗುವ ಪ್ರಯಾಣಿಕರಿಗೆ ನಿಮಿಷಕ್ಕೊಂದು ಬಸ್ಸು ಸಂಚಾರ ಹಾಗೂ ಅನೇಕ ವಾಹನಗಳು ಸಂಚರಿಸುತ್ತಿದ್ದು ಒಳಚರಂಡಿ ಅವ್ಯವಸ್ಥೆ ಯಿಂದ ರಸ್ತೆಯಲ್ಲಿ ಕೆಸರು ನೀರು ನಿಂತು ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಕಂಟಕವಾಗಿ ಪರಿಣಮಿಸಿದೆ.

ಈ ಬಗ್ಗೆ ಅನೇಕ ಬಾರಿ ಹೆದ್ದಾರಿ ಪ್ರಾಧಿಕಾರ ಶಾಸಕರಿಗೆ ಸಂಸದರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಕಾರ್ಯಗತಗೊಂಡಿಲ್ಲ.

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಹಳೆಯಂಗಡಿ ಪ್ರದೇಶಕ್ಕೆ ಭೇಟಿ ನೀಡಿ ಕಿನ್ನಿಗೋಳಿ ಕಡೆಗೆ ಹೋಗುವ ರಸ್ತೆ ಅಗಲೀಕರಣದ ಬಗ್ಗೆ ಪರಿಶೀಲಿಸಿದರೂ ಯಾವುದೇ ಫಲಿತಾಂಶ ಕಾಣುತ್ತಿಲ್ಲ.

ಭಾರಿ ಮಳೆಗೆ ರಸ್ತೆ ಕೆಸರುಮಯವಾಗಿದ್ದು ಸಂಚಾರ ದುಸ್ತರವಾಗಿದೆ. ಕೂಡಲೇ ಸಂಬಂಧಪಟ್ಟ ಆಡಳಿತ ಎಚ್ಚೆತ್ತು ಅವ್ಯವಸ್ಥೆಯನ್ನು ಸರಿಪಡಿಸಿ ಪ್ರಯಾಣಿಕರ ವಾಹನ ಸವಾರರ ಸಂಕಷ್ಟ ದೂರ ಮಾಡುವರೇ ಕಾದುನೋಡಬೇಕಾಗಿದೆ.

Edited By : Shivu K
Kshetra Samachara

Kshetra Samachara

13/08/2021 04:13 pm

Cinque Terre

8.96 K

Cinque Terre

1

ಸಂಬಂಧಿತ ಸುದ್ದಿ