ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹೊತ್ತಿ ಉರಿದ ರಾಷ್ಟ್ರೀಯ ಹೆದ್ದಾರಿ ದಾರಿದೀಪ ಪಬ್ಲಿಕ್ ನೆಕ್ಸ್ಟ್ ವರದಿ ಫಲಶ್ರುತಿ

ಮುಲ್ಕಿ: ಮುಲ್ಕಿ ಬಸ್ಸು ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ ದಾರಿದೀಪ ಉರಿಯದೆ ಕತ್ತಲು ಆವರಿಸಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ, ನಡೆದಾಡಲು ತೀವ್ರ ಸಂಕಷ್ಟ ಎದುರಾಗಿದೆ ಎಂಬ "ಪಬ್ಲಿಕ್ ನೆಕ್ಸ್ಟ್" ವರದಿಯಲ್ಲಿ ಪ್ರಕಟವಾಗಿದ್ದು ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯ ದಾರಿ ದೀಪ ಸಾಧಾರಣ ಮಟ್ಟಿಗೆ ದುರಸ್ತಿ ಪಡಿಸಿದ್ದಾರೆ.

ಇತಿಹಾಸದಲ್ಲಿ ಪ್ರಥಮ ಬಾರಿಗೆ ಹೆದ್ದಾರಿ ಇಲಾಖೆ ಎಚ್ಚೆತ್ತು ದಾರಿ ದೀಪ ದುರಸ್ತಿ ಮಾಡಿದೆ ಎಂದು ನಾಗರಿಕರು ಆಶ್ಚರ್ಯಚಕಿತರಾಗಿ ಹೇಳಿದ್ದು ದಾರಿದೀಪದ ಅವ್ಯವಸ್ಥೆ ಬಗ್ಗೆ ಗಮನ ಸೆಳೆದ ಪಬ್ಲಿಕ್ ನೆಕ್ಸ್ಟ್ ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ

ಅದೇ ರೀತಿ ಕಳೆದ ಹಲವಾರು ವರ್ಷಗಳಿಂದ ಮುಲ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಸರ್ವಿಸ್ ರಸ್ತೆ ಅರ್ಧಂಬರ್ಧ ಕಾಮಗಾರಿ ನಡೆದಿದ್ದು ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲೇ ಹೆದ್ದಾರಿ ಇಲಾಖೆ ಎಚ್ಚೆತ್ತು ಸರ್ವಿಸ್ ರಸ್ತೆ ಕಾಮಗಾರಿಯನ್ನು ಪುಟ್ಟಿ ಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Edited By : Manjunath H D
Kshetra Samachara

Kshetra Samachara

09/08/2021 10:40 pm

Cinque Terre

20.09 K

Cinque Terre

3

ಸಂಬಂಧಿತ ಸುದ್ದಿ