ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸರಕಾರಿ ಆಸ್ಪತ್ರೆ ಶವಾಗಾರದ ಬಳಿ ಗಿಡಗಂಟಿಗಳ ತೆರವಿಗೆ ಆಗ್ರಹ

ಮುಲ್ಕಿ: ಅಭಿವೃದ್ಧಿ ಹೊಂದುತ್ತಿರುವ ಮುಲ್ಕಿ ಸರಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಕಾಡು ಗಿಡಗಂಟಿಗಳು ಬೆಳೆದಿದ್ದು ಶವಾಗಾರಕ್ಕೆ ನಡೆದುಕೊಂಡು ಹೋಗಲು ಹೆದರಿಕೆ ಯಾಗುತ್ತಿದೆ.

ಸರಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಶವಗಾರ ಇದ್ದು ಸುತ್ತಲೂ ಕಾಡು, ಹುಲ್ಲಿನ ಪೊದೆ ಆವರಿಸಿದೆ. ಸರಕಾರಿ ಆಸ್ಪತ್ರೆ ಹಿಂಬದಿಯಲ್ಲಿ ಆಸ್ಪತ್ರೆಯ ಹಳೆ ಗುಜರಿ ಅಂಬುಲೆನ್ಸ್ ಪೊದೆಗಳ ನಡುವೆ ಇದ್ದು ಆಸ್ಪತ್ರೆಯ ಹಿಂಭಾಗ ಗುಜರಿ ಸಾಮಾನುಗಳ ಕೊಂಪೆಯಾಗಿದೆ.

ಕಳೆದ ಹಲವಾರು ವರ್ಷಗಳಿಂದ ಸರಕಾರಿ ಆಸ್ಪತ್ರೆಯ ಎದುರು ಭಾಗದಲ್ಲಿ ಹಳೆಯ ಬಿಟ್ಟುಹೋಗಿರುವ ಕೊಳವೆಬಾವಿ ಪಂಪ್ ಹೌಸ್ ಪಳಿಯುಳಿಕೆಗಳು ತೆರವುಗೊಂಡಿಲ್ಲ. ಇದರ ಬದಿಯಲ್ಲಿ ತ್ರಿಚಕ್ರ ವಾಹನ ನಿಲುಗಡೆ ನಾಮಫಲಕ ಕೆಟ್ಟುಹೋದ ಸ್ಥಿತಿಯಲ್ಲಿದ್ದು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ.

ಮುಲ್ಕಿ ನಾಗರಿಕರ ಕನಸಿನ ಕೂಸಾದ ಸರಕಾರಿ ಆಸ್ಪತ್ರೆಗೆ ಎಕರೆಗಟ್ಟಲೆ ಜಾಗವಿದ್ದು ಕೆಲ ದುಷ್ಕರ್ಮಿಗಳು ಜಾಗ ಅತಿಕ್ರಮಣ ಮಾಡುತ್ತಾ ಬಂದಿದ್ದಾರೆ. ಸರಕಾರಿ ಆಸ್ಪತ್ರೆಗೆ ಸೂಕ್ತ ಆವರಣಗೋಡೆ ಹಾಗೂ ಎದುರು ಭಾಗದಲ್ಲಿ ಗೇಟ್ ವ್ಯವಸ್ಥೆಯಿಲ್ಲದೆ ಅನೇಕ ಸಂಶಯಾತ್ಮಕ ವ್ಯಕ್ತಿಗಳು ಆಸ್ಪತ್ರೆಗೆ ಬಂದು ಹೋಗುತ್ತಿದ್ದು ಆಸ್ಪತ್ರೆ ಹಿಂಬದಿಯ ಕಾಡು ಬೆಳೆದ ಪರಿಸರದಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಾತ್ರಿ ಹೊತ್ತು ವಿದ್ಯುತ್ ಸ್ಥಗಿತಗೊಂಡರೆ ಆಸ್ಪತ್ರೆಯ ಆವರಣದಲ್ಲಿ ಕತ್ತಲು ಮಯ ವಾತಾವರಣ ಉಂಟಾಗಿ ನಡೆದಾಡಲು ಹೆದರಿಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.

ಕೂಡಲೇ ಸಂಬಂಧಪಟ್ಟ ಆಡಳಿತ ಎಚ್ಚೆತ್ತು ಮುಲ್ಕಿ ಸರಕಾರಿ ಆಸ್ಪತ್ರೆಯ ಹಿಂಭಾಗದ ಎದೆ ಗಿಡಗಂಟಿಗಳನ್ನು ತೆರವುಗೊಳಿಸಿ ಆಸ್ಪತ್ರೆ ಎದುರು ಭಾಗದಲ್ಲಿ ಸೂಕ್ತ ಗೇಟ್ ಅಳವಡಿಸಿ ಆಸ್ಪತ್ರೆಗೆ ಬರುವವರಿಗೆ ರಕ್ಷಣೆ ನೀಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Edited By : Shivu K
Kshetra Samachara

Kshetra Samachara

08/08/2021 08:03 pm

Cinque Terre

14.56 K

Cinque Terre

0