ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಅವ್ಯವಸ್ಥೆಗಳ ಆಗರವಾಗಿದೆ.
ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಅದರಂತೆ ಕಳೆದ ಒಂದು ವಾರದ ಹಿಂದೆ ಮುಲ್ಕಿ ಬಸ್ಸು ನಿಲ್ದಾಣದ ಬಳಿಯ ಮೆಡಿಕಲ್ಸ್ ಸಮೀಪದಿಂದ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಶುರುವಾಗಿದ್ದು ಅವ್ಯವಸ್ಥೆಗಳ ಆಗರವಾಗಿ ಪರಿಣಮಿಸಿ ಎರಡು ಕಟ್ಟಡಗಳ ಎದುರು ಭಾಗಕ್ಕೆ ಹಾನಿಯಾಗಿ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದರೂ ಹಾನಿಯಾದ ಅವಶೇಷಗಳು ತೆರವುಗೊಳಿಸದೆ ನಾಗರಿಕರಿಗೆ ತೀವ್ರ ಸಮಸ್ಯೆಯಾಗಿದೆ.
ಈ ನಡುವೆ ಗ್ಯಾಸ್ ಪೈಪ್ ಲೈನ್ ಕಾಮಗಾರಿ ಶುರುವಾಗಿರುವ ಮೆಡಿಕಲ್ ಎದುರು ಭಾಗದಲ್ಲಿ ರಿಕ್ಷಾ ನಿಲ್ದಾಣದ ಸಮೀಪ ಸುಮಾರು 5 ಫಿಟ್ ಆಳದ ಅಪಾಯಕಾರಿ ಕೊಂಡ ತೋಡಿದ್ದು ಇನ್ಯೂ ಮುಚ್ಚಿಲ್ಲ.ಮುಲ್ಕಿ ಬಸ್ಸು ನಿಲ್ದಾಣದ ಬಳಿಯಲ್ಲಿ ನೂರಾರು ಜನ ಓಡಾಡುತ್ತಿದ್ದು ಹೊಂಡದಲ್ಲಿ ಭಾರಿ ಮಳೆಗೆ ನೀರು ತುಂಬಿ ಅಪಾಯಕಾರಿಯಾಗಿ ಪರಿಣಮಿಸಿದೆ.
ಈನಡುವೆ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಕಾಮಗಾರಿಗೆಂದು ಆಗೆದ ಅಪಾಯಕಾರಿ ಹೊಂಡ ಮುಚ್ಚಲು ಇನ್ನೂ ಒಂದು ವಾರ ತಗಲುತ್ತದೆ ಎಂದು ಗುತ್ತಿಗೆದಾರರು ತಿಳಿಸಿದ್ದು ಮೊದಲೇ ಸೂಕ್ತ ಸರ್ವೀಸ್ ರಸ್ತೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿರುವ ಮುಲ್ಕಿ ಬಸ್ಸುನಿಲ್ದಾಣ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಗಳಿವೆ.
ಕೂಡಲೇ ಮುಲ್ಕಿ ನಗರ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಅಧಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ತ್ವರಿತವಾಗಿ ನಡೆಸಲು ಸೂಚನೆ ನೀಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
04/08/2021 07:11 pm